ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಕಳೆದ ಹತ್ತು ವರ್ಷಗಳ ಪ್ರಾರಂಭಗೊಂಡ ಜನನಿ ಸಂಘ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈ ಸಂಘಕ್ಕೆ ಹತ್ತು ವರುಷ ತುಂಬಿದ್ದು, ಇದರ ಅಂಗವಾಗಿ ಮಾ.12 ರಂದು ಕ್ರಿಕೆಟ್ ಪಂದ್ಯಾಟ ಹಾಗೂ ಮಾ.18 ರಂದು ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ‘ಗುಂಡ್ಯ ಟ್ರೋಫಿ 2023’ ನಡೆಯಲಿದೆ ಎಂದು ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದ ಆಶೀರ್ವಚನವನ್ನು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ನೀಡಲಿದ್ದಾರೆ. ದೀಪ ಪ್ರಜ್ವಲೆಯನ್ನು ಸಚಿವ ಎಸ್.ಅಂಗಾರ ಮಾಡಲಿದ್ದಾರೆ. ಪಂದ್ಯಾಟದ ಉದ್ಘಾಟನೆಯನ್ನು ಒ.ಎಲ್.ಇ. ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಆಲೆಟ್ಟಿ ಗ್ರಾಮದ ವಿವಿಧ ಕ್ಷೇತ್ರದಲ್ಲಿ ಸಾಧಕರಾದ ಕೃಷ್ಣ ಕಾಮತ್ ಅರಂಬೂರು, ರಾಮಚಂದ್ರ ಆಲೆಟ್ಟಿ (ಧಾರ್ಮಿಕ), ಜಗದೀಶ್ ಸರಳಿಕುಂಜ (ಉದ್ಯಮ), ರಾಮ ಮಣಿಯಾಣಿ ಆಲೆಟ್ಟಿ, (ದೈವರಾಧನೆ), ಬಾಬು ಅಜಿಲ ಅರಂಬೂರು, (ದೈವ ನರ್ತಕ ಸೇವೆ) ಜೆ.ಕೆ.ರೈ ನಾರ್ಕೋಡು, (ಮಾಧ್ಯಮ), ಲಕ್ಷ್ಮಣ ಗೌಡ ಪರಿವಾರ (ಕೃಷಿ), ಶಿವಪ್ರಸಾದ್ ಆಲೆಟ್ಟಿ,(ಕಲೆ,ಸಂಗೀತ), ಎನ್.ಎ.ರಾಮಚಂದ್ರ, ಜಯಪ್ರಕಾಶ್ ಕುಂಚಡ್ಕ (ರಾಜಕೀಯ), ಪುರುಷೋತ್ತಮ ಕೋಲ್ಚಾರು, (ಸಾಮಾಜಿಕ), ಗಂಗಾಧರ ಕಲ್ಲೆಂಬಿ (ದೇಶಸೇವೆ), ಶ್ರೀಮತಿ ವನಜಾಕ್ಷಿ ಆಲೆಟ್ಟಿ, (ಶಿಕ್ಷಣ), ಪ್ರವೀಣ್ ಆಲೆಟ್ಟಿ (ಯಕ್ಷಗಾನ), ಕು.ಅನುಷಾ ಬಿ (ಕ್ರೀಡೆ) ಇವರನ್ನು ಜನನಿಶ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪಂದ್ಯಾಟದ ಪ್ರಯುಕ್ತ ಸಂಜೆ ಸಪ್ತಸ್ವರ ಮ್ಯೂಸಿಕಲ್ಸ್ ರವರಿಂದ ಸಂಗೀತ ರಸಸಂಜೆ ಹಾಗೂ ತರುಣ್ ಡ್ಯಾನ್ಸ್ ಯುನಿಟ್ ರವರ ನೃತ್ಯ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ಕಾರ್ಯದರ್ಶಿ ಮಹೇಶ್ ಕುತ್ಯಾಳ, ಗೌರವಾಧ್ಯಕ್ಷ ಸುನಿಲ್ ಗುಂಡ್ಯ, ಅಜಿತ್ ಪಿಂಡಿಬನ, ಪ್ರಣೀತ್ ಕಣಕ್ಕೂರು, ಸುರೇಶ್ ಆಲೆಟ್ಟಿ ಉಪಸ್ಥಿತರಿದ್ದರು.
- Thursday
- November 21st, 2024