ನ್ಯಾಷನಲ್ ಕೌನ್ಸಿಲ್ ಫಾರ್ ಕೋ ಆಪರೇಟಿವ್ ಟ್ರೈನಿಂಗ್ (NCCT) ನವ ದೆಹಲಿ ಇದರ ಸಹ ಸಂಸ್ಥೆ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (RICM) ಬೆಂಗಳೂರು ಇವರಿಂದ ನಡೆಸಲ್ಪಡುವ ಹೈಯರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ (HDCM)ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನಿಂದ ಹಾಜರಾದ ಶಿಕ್ಷಣಾರ್ಥಿಗಳಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್ ಜೈನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸುಳ್ಯ ಶಾಖೆಯ ದ್ರವ್ಯ ವಿ. ಜೈನ್, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವಿನಯ ಕುಮಾರ್ ಬಿ.ಎಸ್. ಮತ್ತು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಪ್ರಶಾಂತ್ ಪೂಂಬಾಡಿ ಇವರು ಕ್ರಮವಾಗಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಅಲ್ಲದೆ ಪ್ರಥಮ ಶ್ರೇಣಿಯಲ್ಲಿ ರಂಜಿತ್ ಪಿ. ಎಸ್. ಮಡಪ್ಪಾಡಿ, ದೀಕ್ಷಿತ್ ಎಂ. ಎಚ್. ಐವರ್ನಾಡು, ನವೀನ್ ಎಂ. ಸಿ. ಮಡಪ್ಪಾಡಿ, ಕವಿತಾ ಎನ್. ಮಡಪ್ಪಾಡಿ ಹಾಗೂ ಪೂಜಶ್ರೀ ಕೆ. ಐವರ್ನಾಡು ತೇರ್ಗಡೆ ಹೊಂದಿರುತ್ತಾರೆ.
- Thursday
- November 21st, 2024