ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿದ್ದು ಸಾವಿರಾರು ಭಕ್ತರು ದೈವದ ಪ್ರಸಾದ ಸ್ವೀಕರಿಸಿದರು.
ಮಾ. 03 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಬೆಳಿಗ್ಗೆ ಗಂಟೆ 11-00ಕ್ಕೆ ಶ್ರೀ ದೈವಗಳ ಪ್ರತಿಷ್ಠಾ ಕಾರ್ಯ ನೆರವೇರಿತು. ಸಂಜೆ ಶ್ರೀ ದೈವಕ್ಕೆ ಪೈಂಗುತ್ತಿ, ನಂತರ ಶ್ರೀ ಮುತ್ತಪ್ಪ ದೈವದ ನೇಮ, ಸೇವೆಗಳ ಪ್ರಸಾದ ವಿತರಣೆ ನಡೆಯಿತು. ರಾತ್ರಿ ಸಾವಿರಾರು ಭಕ್ತರು ಅನ್ನದಾನ ಸ್ವೀಕರಿಸಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಬಂದರು,ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ಶ್ರೀ ಮುತ್ತಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ ವಳಲಂಬೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಂದಡ್ಕ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ದೇವಸ್ಥಾನದ ಕಾರ್ಯದರ್ಶಿ ಮರಿಯಪ್ಪ ಮಾವಜಿ, ವಿನ್ಯಾಸ್ ಕೊಚ್ಚಿ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮುತ್ತಪ್ಪ ದೈವದ ಪೂರ್ವಜನ್ಮದ ಕಳಿಕ್ಕಾಪಾಟ್ ನಡೆಯಿತು. ನಂತರ ಶಾರದಾ ಆರ್ಟ್ಸ್ ತಂಡದ ಕಲಾವಿದರು ಮಂಜೇಶ್ವರ ಇವರಿಂದ ಪ್ರದರ್ಶನಗೊಂಡ “ಮಲ್ಲ ಸಂಗತಿಯೇ ಅತ್” ಎಂಬ ತುಳು ಹಾಸ್ಯಮಯ ನಾಟಕ ಭಕ್ತಾಧಿಗಳಿಗೆ ಮನರಂಜನೆ ನೀಡಿತು.
ಮಾ. 04 ರಂದು ಬೆಳಿಗ್ಗೆ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮ,ಪ್ರಸಾದ ವಿತರಣೆ, ನಂತರ ಪೈಂಗುತ್ತಿ ವೆಳ್ಳಾಟಂ ನಡೆಯಿತು.