- Thursday
- November 21st, 2024
ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸಾಧನೆ ಮತ್ತು ಜನಪರ ಯೋಜನೆಗಳನ್ನು ಒಳಗೊಂಡ ದೃಶ್ಯಾವಳಿಗಳನ್ನು ಬಿತ್ತರಿಸುವ ಪ್ರಗತಿ ರಥ ವಾಹನಕ್ಕೆ ಮಾ.1ರಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿಯವರು ಸುಳ್ಯದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಂಡಲದ ಪ್ರದಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ ಹಾಗೂ...
ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಮಾ.5ರಿಂದ 7 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ.ಮಾ.5 ರಂದು ಬೆಳಿಗ್ಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಪೂಜೆ, ಹಸಿರುವಾಣಿ ಸಮರ್ಪಣೆ ನಡೆಯಲಿದೆ. ನಂತರ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ, ವಿಶೇಷ...
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಶ್ರವಣ ದಿನದ ಪ್ರಯುಕ್ತ ಮಾ.03 ಶುಕ್ರವಾರದಂದು ಬೆಳಿಗ್ಗೆ ಕಿವಿ ಮೂಗು ಗಂಟಲಿನ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ನುರಿತ ತಜ್ಞರಿಂದ ತಪಾಸಣೆ ನಡೆಸಲಾಗುವುದು, ಆದುದರಿಂದ 0-6 ವರ್ಷದ ಮೂಗು, ಗಂಟಲು ಕಿವಿಯ ಯಾವುದೇ ಸಮಸ್ಯೆ ಇರುವ ಮಕ್ಕಳನ್ನು ತಪಾಸಣಾ ಶಿಬಿರಕ್ಕೆ ಕರೆ ತರಬೇಕಾಗಿ ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ತಿಳಿಸಿದ್ದಾರೆ.
ಅಲೆಕ್ಕಾಡಿ ಶಾಲಾ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ ವತಿಯಿಂದ ಮಾ.9ರಂದು ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.ಎಂದು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗಾರು : ಮಾ.3 ಮತ್ತು 4 ರಂದು ಮುತ್ತಪ್ಪ ತಿರುವಪ್ಪ ದೈವದ ಪುನರ್ ಪ್ರತಿಷ್ಠೆ ಹಾಗೂ ಜಾತ್ರೋತ್ಸವ ಗುತ್ತಿಗಾರಿನ ಮುತ್ತಪ್ಪನಗರದಲ್ಲಿರುವ ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಶ್ರೀ ಮುತ್ತಪ್ಪ ತಿರುವಪ್ಪ ದೈವದ ನೇಮೋತ್ಸವ ಮಾ. 03 ಮತ್ತು ಮಾ. 04 ರಂದು ಪುನರ್ ಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರೋತ್ಸವ ನಡೆಯಲಿದೆ.ಮಾ....
ಮಾಣಿಯಲ್ಲಿ ಮಾ.1 ರಂದು ನಡೆದ ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎಸ್ಡಿಎಂಸಿ ಯ 21ನೇ ವರ್ಷಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಳ್ಯ ತಾಲೂಕಿನ ಅಚ್ರಪ್ಪಾಡಿ ಶಾಲೆಯು ತಾಲೂಕು ಮಟ್ಟದ "ಕ್ರಿಯಾಶೀಲ ಶಾಲಾಭಿವೃದ್ಧಿ ಮತ್ತು...