Ad Widget

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ – ಸನ್ಮಾನ ಮತ್ತು ಗೌರವ ಸಮರ್ಪಣಾ ಸಮಾರಂಭ

. . . . .

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.24 ರಂದು ಬೃಹತ್ ರಕ್ತದಾನ ಶಿಬಿರ ಹಾಗೂ ವಾರ್ಷಿಕ ಸಭಾ ಕಾರ್ಯಕ್ರಮ ನಡೆಯಿತು. ಹಾಗೂ ಈ ಸಂದರ್ಭದಲ್ಲಿ ಸನ್ಮಾನ ಹಾಗೂ ಗೌರವಾರ್ಪಣಾ ಸಮಾರಂಭ ನಡೆಯಿತು.
ಬೆಳಿಗ್ಗೆ ರೆಡ್ ಕ್ರಾಸ್ ಸೊಸೈಟಿ, ಗುತ್ತಿಗಾರು ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಸರಕಾರಿ ಆಸ್ಪತ್ರೆ ಗುತ್ತಿಗಾರು ಇಲ್ಲಿ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರದ ಉದ್ಘಾಟನೆಯನ್ನು ಡಾ.ಅನುಶ್ರೀ ನೆರವೇರಿಸಿದರು. 41 ಜನ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರಾದ ಮಹೇಶ್ ಕೊಪ್ಪತ್ತಡ್ಕ, ರೆಡ್ ಕ್ರಾಸ್ ಮಂಗಳೂರು ಇದರ ವತಿಯಿಂದ ಪ್ರವೀಣ್, ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಆರೋಗ್ಯ ಸುರಕ್ಷತಾಧಿಕಾರಿ ಚಂದ್ರಾವತಿ, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮದ್ಯಾಹ್ನ ನಂತರ ವಾರ್ಷಿಕ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಹಾಗೂ ಗೌರವಾರ್ಪಣಾ ಸಮಾರಂಭವು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪ್ರಾರ್ಥನೆಯನ್ನು ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ಇವರು ನೆರವೇರಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಉಮೇಶ್ ಮುಂಡೋಡಿ ಮತ್ತು ಮೀನಾಕ್ಷಿ ಮುಂಡೋಡಿ(ಉದ್ಯಮಿಗಳು, ಕೆನಡಾ), ಸುಬ್ಬಣ್ಣ ಗೌಡ ಮಣಿಯಾನ ಮನೆ ಮತ್ತು ದಮಯಂತಿ ಮಣಿಯಾನ ಮನೆ ದಂಪತಿಗಳು, ಸ್ವಾತಂತ್ರ್ಯ ಹೋರಾಟಗಾರರಾದ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ನಿತ್ಯಾನಂದ ಮುಂಡೋಡಿ, ಡಾ.ನಂದಕುಮಾರ್, ಡಾ.ಚೈತ್ರಾ ಭಾನು, ಡಾ.ಮಹಾಲಿಂಗೇಶ್ವರ ಭಟ್ ದೇವಶ್ಯ, ಯತೀಂದ್ರ ಕಟ್ಟೆಕೋಡಿ ಅವರುಗಳನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ಸೇವಾ ನಿರ್ವಹಣೆ ನೆಲೆಯಲ್ಲಿ ಗ್ರಾಮ ಪಂಚಾಯತ್ ಗುತ್ತಿಗಾರು, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು, ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಂಘ ಗುತ್ತಿಗಾರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನೆಲ್ಲೂರು ಕೆಮ್ರಾಜೆ, ಮಾಧ್ಯಮ ಪ್ರತಿನಿಧಿಗಳು , ರೆಡ್ ಕ್ರಾಸ್ ಸೊಸೈಟಿ ಸುಳ್ಯ, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ಮಹಾತ್ಮ ಸೇವಾ ತಂಡ ಮಡಪ್ಪಾಡಿ, ಲಯನ್ಸ್ ಕ್ಲಬ್ ಗುತ್ತಿಗಾರು, ಜೆ.ಸಿ.ಐ ಪಂಜ ಪಂಚಶ್ರೀ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಗುತ್ತಿಗಾರು, ಹೊಂಬೆಳಕು ಸ್ವಚ್ಛತಾ ತಂಡ ನಾಲ್ಕೂರು, ಚಿರಾಯು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ, ಬಿ.ಎಮ್.ಎಸ್ ಸಂಯೋಜಿತ ಆಟೋ ಚಾಲಕರ ಸಂಘ ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್ (ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇವರುಗಳನ್ನು ಸನ್ಮಾನಿಸಲಾಯಿತು.
ವೈಯಕ್ತಿಕ ನೆಲೆಯಲ್ಲಿ ನಿವೃತ್ತ ಹಿರಿಯ ಯೋಧ ಗಂಗಾಧರ ದಂಬೆಕೋಡಿ, ನಿವೃತ್ತ ಯೋಧ ಮಹೇಶ್ ಮತ್ತು ಅನಿತಾ ಮಹೇಶ್ ಕೊಪ್ಪತ್ತಡ್ಕ, ವೆಂಕಟ್ ವಳಲಂಬೆ, ಸುಕುಮಾರ ಕಂದ್ರಪ್ಪಾಡಿ ಹರಿಶ್ಚಂದ್ರ ಕೇಪುಳುಕಜೆ, ಹಿರಿಯ ರಕ್ತದಾನಿ ಪಿ.ಬಿ.ಸುಧಾಕರ ರೈ, ಸನತ್ ಮುಳುಗಾಡು, ಶಿವರಾಮ ಕರುವಾಜೆ, ಲೆಕ್ಕಪರಿಶೋಧಕರಾದ ಬಾಲಕೃಷ್ಣ ನಡುಗಲ್ಲು, ಟಿ.ಯನ್ ಸತೀಶ್ ಕಲ್ಮಕಾರು, ರವಿಪ್ರಕಾಶ್ ಬಳ್ಳಡ್ಕ, ಕೇಶವ ಹೊಸೊಳಿಕೆ, ವಿ.ಜೆ ವಿಖ್ಯಾತ್ ಬಾರ್ಪಣೆ, ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಅಭಿಲಾಷಾ ಮೊಟ್ನೂರು, ಲತಾ ರವಿರಾಜ್ ಅಡ್ಕಾರ್, ಶರತ್ ಮರ್ಗಿಲಡ್ಕ, ನಿರಂತ್ ದೇವಶ್ಯ, ಯೋಗೀಶ್ ಹೊಸೊಳಿಕೆ, ಪಂಜ ಪಂಚಾಯತ್ ನ ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತೆ ಮೀನಾಕ್ಷಿ ಕಲ್ಲಾಜೆ, ಗುತ್ತಿಗಾರು ಗ್ರಾಮ ಪಂಚಾಯತ್ ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕಾವೇರಿ ಪಾರೆಮಜಲು, ಸೌಭಾಗ್ಯ ವಿಕಲಚೇತನರ ಸೊಸೈಟಿ ಅಧ್ಯಕ್ಷರಾದ ಬಾಲಚಂದ್ರ ಹೊಸೊಳಿಕೆ, ಅಮರ ಸುದ್ದಿ ಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಇವರುಗಳನ್ನು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ನಿವೃತ್ತ ಮುಖ್ಯ ಗುರುಗಳಾದ ಜತ್ತಪ್ಪ ಮಾಸ್ತರ್ ಚಿಲ್ತಡ್ಕ, ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರು, ಕೋಶಾಧಿಕಾರಿ, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!