ಇಂದು ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಪ್ಯೂಯಲ್ಸ್ ಶುಭಾರಂಭ – ನಿರಂತರ ಸೇವೆ ಲಭ್ಯ
ಅರಂತೋಡಿನಲ್ಲಿ ಪ್ರಹ್ಲಾದ್ ಕರಿಂಬಿ ಅರಂತೋಡು ಮಾಲಕತ್ವದ ನಯಾರ ಎನರ್ಜಿ ಲಿ.ನವರ ಶ್ರೀ ಮಲ್ಲಿಕಾರ್ಜುನ ಪ್ಯೂಯಲ್ಸ್ ಪೆಟ್ರೋಲ್ ಪಂಪ್ ಇಂದಿನಿಂದ ಶುಭಾರಂಭಗೊಳ್ಳಲಿದೆ.ನೂತನ ಸಂಸ್ಥೆಯನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಅರಂತೋಡು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ವಹಿಸಲಿದ್ದಾರೆ.ಅತಿಥಿಗಳಾಗಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ,ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಯಂ.ಕಿಶೋರ್ ಕುಮಾರ್, ಅರಂತೋಡು ವಾಹನ ಮಾಲಕ,ಚಾಲಕರ ಸಂಘದ ಅಧ್ಯಕ್ಷ ಜನಾರ್ದನ ಎರ್ನೆ, ನಯಾರ ಎನರ್ಜಿ ಲಿ.ಮಂಗಳೂರು ಇದರ ವಿಭಾಗೀಯ ವ್ಯವಸ್ಥಾಪಕ ಮೋಹಿತ್ ನಾರಾಯಣ ಭಾಗವಹಿಸಲಿದ್ದಾರೆ.ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡಿನಲ್ಲಿ ತಾಲೂಕಿನ ಪ್ರಥಮ ನಯಾರ ಎನರ್ಜಿ ಲಿ.ಬಂಕ್ ಉದ್ಘಾಟನೆಗೊಳ್ಳಲಿದೆ. ಬಂಕ್ ನ್ನು ಆಕರ್ಷಕವಾಗಿ ನಿರ್ಮಿಸಲಾಗಿದ್ದು, ಪ್ಯೂಯಲ್ ನೊಂದಿಗೆ ಫ್ರಿ ನೈಟ್ರೋಜನ್ , ಕುಡಿಯುವ ನೀರು, ಟಾಯ್ಲೆಟ್ ವ್ಯವಸ್ಥೆಯೊಂದಿಗೆ ದಿನದ 24 ಗಂಟೆಯೂ ತೆರೆದಿರುತ್ತದೆ.ಎಂದು ಮಾಲಕರು ತಿಳಿಸಿದ್ದಾರೆ.