
ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಜರಗಿತು. ಫೆ.27ರಂದ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ಜರಗಿತು. ಬಳಿಕ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಜರಗಿತು. ರಾತ್ರಿ ಆಂಜನೇಯ ಸ್ವಾಮಿಯ ಅಂಗಣ ಪ್ರವೇಶವಾಗಿ ಆಂಜನೇಯ ಸ್ವಾಮಿ ನೇಮೋತ್ಸವ, ಪ್ರಸಾದ ವಿರತಣೆ ಜರಗಿತು. ರಾತ್ರಿ ದೇವರ ಉತ್ಸವ ಬಲಿ, ಭೂತಬಲಿ, ಕಟ್ಟೆಪೂಜೆ, ದರ್ಶನಬಲಿ, ಗುಳಿಗರಾಜ ದೈವದ ಕೋಲ, ದೈವ – ದೇವರ ಭೇಟಿ, ಬಟ್ಟಲು ಕಾಣಿಕೆ, ಶ್ರೀಮುಡಿ ಗಂಧಪ್ರಸಾದ ಜರಗಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಶಿವರಾಮ ರೈ ಕುರಿಯ, ಸಂಚಾಲಕ ರವಿಪ್ರಸಾದ್ ಕಜೆಗದ್ದೆ, ಪ್ರ.ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ ಅಡ್ಕಾರುಪದವು, ಕೋಶಾಧಿಕಾರಿ ಜಯಂತ ಗೌಡ ಅಡ್ಕಾರು, ಉಪಾಧ್ಯಕ್ಷ ನಾಗೇಶ್ ಅಡ್ಕಾರು, ಸೇವಾ ಸಮಿತಿ ಅಧ್ಯಕ್ಷ ವಿವೇಕ್ ರೈ ಡಿಂಬ್ರಿಗುತ್ತು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.