- Wednesday
- April 2nd, 2025

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.24 ರಂದು ಬೃಹತ್ ರಕ್ತದಾನ ಶಿಬಿರ ಹಾಗೂ ವಾರ್ಷಿಕ ಸಭಾ ಕಾರ್ಯಕ್ರಮ ನಡೆಯಿತು. ಹಾಗೂ ಈ ಸಂದರ್ಭದಲ್ಲಿ ಸನ್ಮಾನ ಹಾಗೂ ಗೌರವಾರ್ಪಣಾ ಸಮಾರಂಭ ನಡೆಯಿತು.ಬೆಳಿಗ್ಗೆ ರೆಡ್ ಕ್ರಾಸ್ ಸೊಸೈಟಿ, ಗುತ್ತಿಗಾರು ಗ್ರಾಮ ಪಂಚಾಯತ್, ಸರಕಾರಿ ಆಸ್ಪತ್ರೆಯ ಸಹಕಾರದೊಂದಿಗೆ ಸರಕಾರಿ ಆಸ್ಪತ್ರೆ ಗುತ್ತಿಗಾರು ಇಲ್ಲಿ ರಕ್ತದಾನ ಶಿಬಿರ ನಡೆಯಿತು.ರಕ್ತದಾನ...

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ಇರ್ವೆರ್ ಉಳ್ಳಾಕ್ಲು, ಪರಿವಾರ ದೈವಗಳ ಮತ್ತು ಪಾಲೆಪ್ಪಾಡಿ ಶ್ರೀ ಪಂಜುರ್ಲಿ ದೈವದ ಹಾಗೂ ದರ್ಖಾಸ್ತು ಉಳ್ಳಾಕ್ಲು,ಅಡ್ಯಂತಾಯ ಕಟ್ಟೆಯ ನವೀಕರಣ ಪ್ರತಿಷ್ಠಾ ಕಲಶವು ಫೆ.23 ರಿಂದ ಫೆ.27 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಫೆ.23 ರಂದು ತಂತ್ರಿಗಳ ಆಗಮನದ...

ಕೊಲ್ಲಮೊಗ್ರ ಗ್ರಾಮದ ಕೊಂದಾಳ ವೆಂಕಟ್ರಮಣ ಗೌಡರ ಪತ್ನಿ ಶ್ರೀಮತಿ ಶಾರದಾ ಕೊಂದಾಳ ಫೆ. 28 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಚಿಂತನ್, ಪುತ್ರಿ ಚೈತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಸ್ಪರ್ಧಾ ಕಾರ್ಯಕ್ರಮವು ಜರುಗಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು...

ಅರಂತೋಡಿನಲ್ಲಿ ನಿರ್ಮಾಣಗೊಂಡ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ರವರ ನಯಾರಾ ಎನರ್ಜಿ ಪೆಟ್ರೋಲ್ ಪಂಪ್ ಇಂದು ಲೋಕಾರ್ಪಣೆಗೊಂಡಿತು. ಪೆಟ್ರೋಲ್ ಬಂಕ್ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ ನೆರವೇರಿಸಿ ಮಾತನಾಡಿಗ್ರಾಹಕರಿಗೆ ಒಳ್ಳೆಯ ಅನುಕೂಲವಾಗಲಿ ,ಇಡೀ ಗ್ರಾಮವೇ ಮೆಚ್ಚುವಂತಹ ಕೆಲಸ ಪ್ರಹ್ಲಾದ್ ಕುಟುಂಬ ಮಾಡಿದೆ ಎಂದು ಶುಭ ಹಾರೈಸಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಾಹಿದ್ ಮಾತನಾಡಿ...

ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಪಿಸ್ಟುಲಾ,ಫಿಶರ್ ಹಾಗೂ ಗುದರೋಗಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮಾ.5 ರಂದು ನಡೆಯಲಿದೆ.ಪೈಲ್ಸ್ (ಮೂಲವ್ಯಾಧಿ), ಪಿಸ್ಟುಲಾ (ಭಗಂದರ) ಹಾಗೂ ಫಿಶ ಮುಂತಾದ ಗುದ ರೋಗಗಳ ತಪಾಸಣೆ, ಚಿಕಿತ್ಸೆ, ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಕ್ಷಾರ ಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ಯಂ. ತಿಳಿಸಿದ್ದಾರೆ. ತಜ್ಞ...

ಗುತ್ತಿಗಾರಿನ ಶ್ರೀ ಗುರು ಕಾಂಪ್ಲೆಕ್ಸ್ ನಲ್ಲಿ ರಾಜೇಶ್ ಪೈಕ ಹಾಗೂ ಶ್ರೀಮತಿ ಶೃತಿ ರಾಜೇಶ್ ಮಾಲಕತ್ವದ ಶ್ರೀ ಮಹಾಲಕ್ಷ್ಮಿ ಫ್ಯಾನ್ಸಿ, ಫೂಟ್ ವೇರ್ ಹಾಗೂ ಲೇಡಿಸ್ ಟೈಲರಿಂಗ್ ಮಳಿಗೆ ಫೆ.23 ರಂದು ಶುಭಾರಂಭಗೊಂಡಿತು.

ದ.ಕ. ಜಿಲ್ಲಾ ಗೃಹರಕ್ಷಕ ದಳದ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಚುನಾವಣಾ ಪೂರ್ವಸಿದ್ಧತಾ ತಯಾರಿ ಸಲುವಾಗಿ 25 ಗೃಹರಕ್ಷಕರನ್ನು ಸಿ ಫಾರಂ ನೀಡಿ ಫೆ.28ರಂದು ನೇಮಕ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ವಹಿಸಿ ಮಾತನಾಡಿ ಶಿಸ್ತುಬದ್ಧವಾಗಿ ಇಲಾಖಾ ನಿಯಮಾನುಸಾರ ಸಮವಸ್ತ್ರ ಧರಿಸಿ ಹಾಗೂ...

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಕಾಲಾವಧಿ ಜಾತ್ರಾಮಹೋತ್ಸವವು ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ಮಾರ್ಗದರ್ಶನದಲ್ಲಿ ಜರಗಿತು. ಫೆ.27ರಂದ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಪವಮಾನ ಅಭಿಷೇಕ ಜರಗಿತು. ಬಳಿಕ ಗುಳಿಗರಾಜ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಜರಗಿತು. ರಾತ್ರಿ...

ಸುಳ್ಯ ನಗರ ಪಂಚಾಯತ್ನ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಕಿಶೋರಿ ಶೇಟ್ ಆಯ್ಕೆಯಾಗಿದ್ದಾರೆ. ಫೆ.28ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷತೆಗೆ ಕಿಶೋರ್ ಶೇಟ್ ಅವರ ಹೆಸರು ಮಾತ್ರ ಸೂಚಿಲ್ಪಟ್ಟಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಮುಖ್ಯಾಧಿಕಾರಿ...

All posts loaded
No more posts