Ad Widget

ಅಡ್ತಲೆ ರಸ್ತೆ ಗುದ್ದಲಿ ಪೂಜೆ ದಿನವೇ ಕಾಮಗಾರಿ ಆರಂಭಿಸಿ – ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯ ತಾಲೂಕಿನ ಅರಂತೋಡು- ಅಡ್ತಲೆ- ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಕೆಲ ತಿಂಗಳಿನಿಂದ ಮತದಾನ ಬಹಿಷ್ಕಾರ ನಿರ್ಧಾರ ಮಾಡಿ ಅಹವಾಲು ಸಲ್ಲಿಸುತ್ತಿದ್ದು, ಈ ಬೆನ್ನಲ್ಲೇ ಶಾಸಕ ಹಾಗೂ ಸಚಿವ ಎಸ್ .ಅಂಗಾರ ಕಾಮಗಾರಿ ಗುದ್ದಲಿ ಪೂಜೆಗೆ ದಿನ ನಿಗದಿ ಮಾಡಿದ್ದಾರೆ.
ಆದರೆ ಇದಕ್ಕೆ ಸೆಡ್ಡು‌ ಹೊಡೆದಿರುವ ನಾಗರಿಕ ಹಿತರಕ್ಷಣಾ ವೇದಿಕೆ ಗುದ್ದಲಿ ಪೂಜೆಗೆ ಗ್ರಾಮಸ್ಥರು ಮಾನ್ಯತೆ ನೀಡುವುದಿಲ್ಲ, ಒಂದು ವೇಳೆ ಗುದ್ದಲಿ ಪೂಜೆ ಮಾಡುವುದೇ ಆದರೆ ಅದೇ ದಿನ ಕಾಮಗಾರಿ ಆರಂಭಿಸಿ ಎಂದು ಸವಾಲೆಸೆದಿದ್ದಾರೆ.ಸುಳ್ಯದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ನಮ್ಮ ರಸ್ತೆಗೆ ಈ ಮೊದಲು ಹಲವಾರು ಕೋಟಿ ಅನುದಾನಗಳು ಘೋಷಣೆ ಆಗಿದೆ. ಆದರೆ ಅದ್ಯಾವುದೂ ಕಾಮಗಾರಿ ರೂಪ ಪಡೆದಿಲ್ಲ. ಇದೀಗ ಮೂರು ಕೋಟಿ ಅನುದಾನದ ಇದೆ ಎಂದು ಹೇಳುತ್ತಿದ್ದಾರೆ. ಅದರ ಮೇಲೂ ಸಹ ನಮಗೆ ಭರವಸೆ ಇಲ್ಲ. ಆದುದರಿಂದ ಗುದ್ದಲಿ ಪೂಜೆ ಮಾಡುವ ದಿನ ಕಾಮಗಾರಿ ಪ್ರಾರಂಭ ಮಾಡಲಿ ಅಥವಾ ಕಾಮಗಾರಿ ಮಾಡುವ ದಿನ ಗುದ್ದಲಿ ಪೂಜೆ ಮಾಡಲಿ. ನಮ್ಮ ಬೇಡಿಕೆಯು ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಆಗಬೇಕು. ಅಲ್ಲೀ ತನಕ ಅಭಿವೃದ್ಧಿ ಮಾಡಿ ತೋರಿಸಲಿ ನಾವೇ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಸನ್ಮಾನ ಮಾಡುತ್ತೇವೆ.
ನಮ್ಮ ಹೋರಾಟ ರಸ್ತೆ ಅಭಿವೃದ್ಧಿ ಹಾಗೂ ಅರಮನೆಗಯ ಸೇತುವೆ. ಇದು ಈಡೇರುವ ತನಕ ನಿರಂತರ ಹೋರಾಟ ಮಾಡುತ್ತೇವೆ.
ಹಲವಾರು ವರ್ಷಗಳಿಂದ ನಿರಂತರ ಈ ಭಾಗದ ಜನರ ಬೇಡಿಕೆಯಾಗಿತ್ತು. ಅರಂತೋಡು ಅಡ್ತಲೆ ರಸ್ತೆ ಈ ರಸ್ತೆ ಅಭಿವೃದ್ಧಿ ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ಯವರೆಗೆ ನಾವು ಮನವಿ ಮಾಡಿದ್ದೇವು. ಇದು ವರೆಗೂ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಅದರಿಂದ ಈ ರಸ್ತೆ ಅಭಿವೃದ್ಧಿಯಾಗುವರೆಗೂ ನಾವು ಯಾವುದೇ ಚುನಾವಣೆಯಲ್ಲಿ, ಪಕ್ಷದ ಪರವೂ ಕೆಲಸ ಮಾಡುವುದಿಲ್ಲ, ನೋಟಾ ಅಭಿಯಾನ ಮಾಡುತ್ತೇವೆ ಎಂದಿದ್ದಾರೆ.
30 ವರ್ಷದಿಂದ ಅರಮನೆಗಯ ಸೇತುವೆ ಬೇಡಿಕೆ ಮಾತ್ರ
ಅರಮನೆಗಯ ಸೇತುವೆ ನಿರ್ಮಾಣ ಆಗಬೇಕು ಎನ್ನುವುದು ಹಲವಾರು ವರ್ಷಗಳಿಂದ ಈ ಭಾಗದ ಜನರ ಬೇಡಿಕೆ. ಅದನ್ನು ಇದುವರೆಗೂ ಮಾಡಲು ಯಾವುದೇ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ ಇಲಾಖೆ ವೆಬ್ಸೈಟ್ ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋರಿಸುತ್ತಿದೆ ಇದು ವರೆಗೆ ಅಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಅದರಿಂದ ಆ ಭಾಗದ ಜನರು ಚುನಾವಣಾ ಬಹಿಷ್ಕಾರ ಮಾಡುವುದರೊಂದಿಗೆ ನೋಟ ಅಭಿಯಾನದಲ್ಲಿ ಕೈಜೋಡಿಸುತ್ತೆವೆ ಎಂದು ತೇಜಕುಮಾರ್ ಅರಮನೆಗಯ ಹೇಳಿದರು. ಗೋಷ್ಠಿಯಲ್ಲಿ ಲೋಹಿತ್ ಮೇಲಡ್ತಲೆ, ಮೋಹನ್ ಪಂಜದಬೈಲು ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ, ಶಶಿಕುಮಾರ್ ಉಳುವಾರು, ದುರ್ಗಾಪ್ರಸಾದ್ ಮೆಲಡ್ತಲೆ, ಸೌಮ್ಯ ದುರ್ಗಾ ಪ್ರಸಾದ್, ಶ್ಯಾಮಲಾ ಹರಿಪ್ರಸಾದ್, ಲತಾಜಯರಾಂ, ಗಣೇಶ್ ಅಡ್ತಲೆ
ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ರಂಜಿತ್ ಅಡ್ತಲೆ ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!