ಸುಳ್ಯ : ಗುರುದೇವತಾ ಭಜನಾ ಮಂಜರಿ ಭಜನಾ ಕಮ್ಮಟ

. . . . . . . . .

ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ದ.ಕ.ಜಿಲ್ಲೆ, ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಸುಳ್ಯ ಹಾಗೂ ಶ್ರೀ ಚೆನ್ನಕೇಶವ ದೇವಸ್ಥಾನದ ಸಹಯೋಗದಲ್ಲಿ ಅ.30 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಶ್ರೀ ಗುರುದೇವತಾ ಭಜನಾ ಮಂಜರಿ ಒಂದು ದಿನದ ಭಜನಾ ಕಮ್ಮಟವು ನಡೆಯಿತು.

. . . . . . .

ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊತ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಅಧ್ಯಕ್ಷ ತೆ ವಹಿಸಿದ್ದರು. ಶೃಂಗೇರಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಮುಖ್ಯಸ್ಥರಾದ ಉಮೇಶ್ ಹರಿಹರ ರವರು ದೀಪ ಪ್ರಜ್ವಲಿಸಿದರು. ಅತಿಥಿಗಳಾಗಿ ಶೃಂಗೇರಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದ ಸಂಚಾಲಕ ಶ್ರೀಧರ ಶಾಸ್ತ್ರಿ ತರಬೇತಿ ಶಿಬಿರದ ಬಗ್ಗೆ ವಿವರ ನೀಡಿದರು. ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಉಪಸ್ಥಿತರಿದ್ದರು.
ಸಂಚಾಲಕಿ ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶ್ರೀಮತಿ ಲೀಲಾ ಪ್ರಾರ್ಥಿಸಿದರು. ಸಮಿತಿ ಖಜಾಂಜಿ ಅಶೋಕ ಪ್ರಭು ಸುಳ್ಯ ವಂದಿಸಿದರು. ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶೃಂಗೇರಿ ಮಹಾ ಸಂಸ್ಥಾನದಿಂದ ನಿಯೋಜಿಸಲ್ಪಟ್ಟ ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಯವರು ಭಜನಾ ತರಬೇತಿ ನೀಡಿದರು. ಪಕ್ಕ ವಾದ್ಯದಲ್ಲಿ ವಿಜಯ ಮೇನಾಲ ಮತ್ತು ಸಚಿನ್ ನಿಂತಿಕಲ್ಲು ರವರು ಸಹಕರಿಸಿದರು. ಸುಳ್ಯ ಸುಬ್ರಹ್ಮಣ್ಯ ಭಜನಾ ಮಂಡಳಿ ವತಿಯಿಂದ ರಾಮಕೃಷ್ಣ ಕಾಟುಕುಕ್ಕೆ ಉಮೇಶ್ ಹರಿಹರ ರವರನ್ನು ಸನ್ಮಾನಿಸಲಾಯಿತು.

ಸಮಿತಿಯ ಕಾರ್ಯದರ್ಶಿ ಕೃಷ್ಣ ರಾವ್ ಇಂಜಿನಿಯರ್, ನಿರ್ದೇಶಕರಾದ ಭಾಸ್ಕರ ರಾವ್ ಬಯಂಬು, ರೆಂಜಾಳ, ಅರುಣ್ ಕುಮಾರ್ ನೆಲ್ಲಿಕುಂಜ, ಸತೀಶ್ ರಾವ್ ದಾಸರಬೈಲು, ಶ್ರೀಮತಿ ಉಮಾಜೋಶಿ, ಶ್ರೀಮತಿ ಸುಜಾತ ಎನ್, ಲಕ್ಷ್ಮೀ ನಾರಾಯಣ ರಾವ್ ರೆಂಜಾಳ, ವಿದ್ಯಾ ಬೇರಿಕೆ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading