

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಪಂಜಿಗುಡ್ಡೆಯಲ್ಲಿ ತೀರಾ ಬಡತನ ಹಾಗೂ ಅನೇಕ ವರ್ಷದಿಂದ ಆರೋಗ್ಯ ಸಮಸ್ಯೆ ಇರುವ ಕುಶಾಲಪ್ಪ ರವರ ಕುಟುಂಬದವರಿಗೆ 25000 ರೂ.ಗಳ ಧನಸಹಾಯ ಮಾಡಲಾಯಿತು. ಈ ಸಂದರ್ಭ ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ, ಸದಸ್ಯರಾದ ರಮಣಿ ಗಾಣಿಗ ಹಾಗೂ ನಂದಗೋಕುಲ ಟ್ರಸ್ಟ್ ಸಂಘದ ಅಧ್ಯಕ್ಷರಾದ ಕಾರ್ತಿಕ್, ಕಾರ್ಯದರ್ಶಿಯರಾದ ಲಿಖಿತಾ ಕುಮಾರಿ, ಹರಿಪ್ರಸಾದ್ ಮತ್ತು ಸಂಘದ ಸದಸ್ಯರಾದ ಮೋಹನ್ ಕೆ ಪಿ, ನವೀನ್ ಕೆ ಪಿ, ಪ್ರಮೋದ್, ರವಿರಾಜ್, ಪವನ್, ಕಾರ್ತಿಕ್, ಪ್ರಸಾದ್, ನಿತಿನ್, ಸೌಮ್ಯ, ಶ್ವೇತಾ, ಆಶಿತಾ, ಮೋಹನ್ ಹಾಜರಿದ್ದರು.