ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷರಾದ ಲಿಂಗಪ್ಪ
ಬೆಳ್ಳಾರೆಯವರು ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅ.16 ರಂದು ಜೇಸಿಐ ಬೆಳಣ್ ನಲ್ಲಿ ನಡೆಯುವ ವ್ಯವಹಾರ ಸಮ್ಮೇಳನದಲ್ಲಿ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇವರು ಜೇಸೀ ವಲಯ ತರಬೇತುದಾರರಾಗಿ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ.ನಾಯಕತ್ವ ಗುರಿ ನಿರ್ಧಾರ, ಮಾನವೀಯ ಸಂಬಂಧಗಳು ಮೊದಲಾದ ಅನೇಕ ತರಬೇತಿ ನೀಡಿರುತ್ತಾರೆ.ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಶ್ರೀ ತಂತ್ರಿ ಗಣಾಧಿರಾಜ ಇವರ ಸಂಚಾಲಕತ್ವದ ಕೊಲ್ಲಂಗಾನ ಮೇಳ, ಮಾಣಿಲ ಮೇಳ ಮತ್ತು ಶ್ರೀ ಲಕ್ಷ್ಮಣ ಆಚಾರ್ಯ ಅವರ ನೇತೃತ್ವದ ಶ್ರೀ ನಾಕೂರು ಗೋಪಾಲಕೃಷ್ಣ ಯಕ್ಷಗಾನ ಮೇಳ ಎಡಮಂಗಲ ಇವುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಧರ್ಮ ಸಂಕಲ್ಪ ಮತ್ತು ಪಾವನ ಮಾತೆ ನೇತ್ರಾವತಿ ಎಂಬ ಎರಡು ಯಕ್ಷಗಾನ ಕೃತಿ ರಚಿಸಿ,ಪ್ರದರ್ಶನಗೊಂಡಿರುತ್ತದೆ. ಶಿಕ್ಷಕರ ಯಕ್ಷಗಾನ ಒಕ್ಕೂಟ ಇದರ ಅಧ್ಯಕ್ಷ ರಾಗಿ ಹಲವು ಯಶಸ್ವಿ ಕಾರ್ಯಕ್ರಮ ಗಳನ್ನು ಸಂಘಟಿಸಿರುತ್ತಾರೆ.
ಯಕ್ಷ ಕಲಾ ಬೋಧಿನೀ ಬೆಳ್ಳಾರೆ ಇದರ ಸಂಚಾಲಕರಾಗಿ ಮಕ್ಕಳಿಗೆ ಉಚಿತ ಯಕ್ಷಗಾನ ನಾಟ್ಯ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ತರಬೇತಿಗಳನ್ನು ನೀಡುವುದರ ಮೂಲಕ ಪ್ರತಿಭಾ ಕಾರಂಜಿ ಮತ್ತು ಯಕ್ಷಗಾನ ಸ್ಪರ್ಧೆ ಗಳನ್ನು ಯಶಸ್ವಿ ಯಾಗಿ ಸಂಘಟಿಸಿರುತ್ತಾರೆ.
ಶಿಕ್ಷಣ ಇಲಾಖೆ ಯಿಂದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ರೋಟರಿ ಪ್ರಶಸ್ತಿ, ಕಮಲ ಪತ್ರ ಪ್ರಶಸ್ತಿ, salute to silent award ಮೊದಲಾದ ಹಲವಾರು ಪ್ರಶಸ್ತಿ ಗಳನ್ನು ಪಡೆದಿರುತ್ತಾರೆ.
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ರಾದ ಶ್ರೀ ಉಮೇಶ್ ಶೆಟ್ಟಿ ಉಬರಡ್ಕ, ಡಿ.ಮನೋಹರ ಕುಮಾರ್, ಶ್ರೀ ಸಂಜಯ್ ಕುಮಾರಗೋಣಿ ಬೀಡು ವಿಶ್ವನಾಥ ರೈ ಬೆಳ್ಳಾರೆ,ಕೆ.ಎಚ್.ದಾಸಪ್ಪ ರೈ ರಂತಹ ಹಿರಿಯ ಕಲಾವಿದರ
ಒಡನಾಟದ ಅನುಭವ ಹೊಂದಿದ್ದಾರೆ.