
ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ ಇಂದು ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ಧನಪತಿ ನಿವೃತ್ತ ದೈ. ಶಿ. ಶಿಕ್ಷಕ ದಯಾನಂದ ಮುತ್ಲಾಜೆ, ಗುತ್ತಿಗಾರು. ರ. ಬೆ. ಸ. ಸಂಘದ ನಿರ್ದೇಶಕರಾದ ಲೋಕೇಶ್ವರ ಡಿ. ಆರ್., ಅಮರ ಸಂಜೀವಿನಿ ಘಟಕದ ಅಧ್ಯಕ್ಷೆ ದಿವ್ಯಾ ಸುಜನ್ ಗುಡ್ಡೆಮನೆ, ಗುತ್ತಿಗಾರು ಪಂಚಾಯತ್ ಗ್ರಂಥಾಲಯ ಪಾಲಕಿ ಅಭಿಲಾಷ ಶಿವಪ್ರಕಾಶ್, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಯುವಕ ಯುವತಿಯರು ಪೊಲೀಸ್ ಇಲಾಖೆ ಸೇರಬೇಕು ಎಂಬ ಪರಿಕಲ್ಪನೆಯೊಂದಿಗೆ ಆರಂಭವಾದ ತರಬೇತಿಗೆ ನಿರೀಕ್ಷೆಗೂ ಮೀರಿ ಯುವಕ ಯುವತಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಾಗಾರ ಮುಗಿದ ನಂತರ ಪ್ರದೀಪ್ ಕೊಲ್ಯ ರವರು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಭೇಟಿ ಮಾಡಿ ಅಲ್ಲಿಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಪೊಲೀಸ್ ಹುದ್ದೆಗೆ ತಯಾರಿ ನಡೆಸಿದ ಪುಸ್ತಕಗಳನ್ನು ಒಂದಷ್ಟು ನೀಡಿದರು. ಮತ್ತು ಇನ್ನೂ ಹೆಚ್ಚಿನ ಬೆಲೆಬಾಳುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವ ಭರವಸೆ ನೀಡಿದರು.