Ad Widget

ಎಲಿಮಲೆ : ಕಾರು-ಸ್ಕೂಟಿ ಅಪಘಾತ ; ಅಣ್ಣ- ತಂಗಿ ಇಬ್ಬರು ದುರ್ಮರಣ

ಎಲಿಮಲೆಯ ಸಮೀಪದ ಜಬಳೆ ಬಳಿ ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮತ್ತು ತಂಗಿ ಇಬ್ಬರೂ ಮೃತಪಟ್ಟ ಹೃದಯವಿದ್ರಾಹಕ ಘಟನೆ ಇಂದು ವರದಿಯಾಗಿದೆ.

. . . . . . . . .

ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

. . . . . . .

ಎಲಿಮಲೆಗೆ ಆಯುಧಪೂಜೆಗೆ ಹೋಗಿದ್ದ ನಿಶಾಂತ್ ತನ್ನ ತಂಗಿ ಮೋಕ್ಷಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆಗೆ  ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಕಾರು ಎಲಿನಮಲೆ ಕ್ಯಾಶ್ಯೂ ಫ್ಯಾಕ್ಟರಿ  ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಇಬ್ಬರನ್ನು ಆಸ್ಪತ್ರೆಗೆ ಕರೆತರುವ ವೇಳೆ ಸುಳ್ಯ ತಲುಪುವ ಹೊತ್ತಿಗೆ ಅಣ್ಣ ಮೃತಪಟ್ಟರೇ ತಂಗಿಯನ್ನು ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಳೆಂದು ತಿಳಿದುಬಂದಿದೆ. 

ಬಾಜಿನಡ್ಕ ದೇವಿದಾಸ್ ಎಂಬವರ ಮಕ್ಕಳಾದ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಮೋಕ್ಷ ಎಲಿಮಲೆಯ ದೇವಚಳ್ಳ ಸ.ಹಿ.ಪ್ರಾ. ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading