Ad Widget

ಬಾಳುಗೋಡು : ಉಕ್ಕಿ ಹರಿದ ನೀರಿಗೆ ಕೊಚ್ಚಿಹೋದ ಏಕೈಕ ಮರದ ಪಾಲ – ಅತಂತ್ರ ಸ್ಥಿತಿಯಲ್ಲಿ ಉಪ್ಪುಕಳ‌ ನಿವಾಸಿಗಳು

ಕಳೆದ ತಡರಾತ್ರಿ(ಜು.9) ಸುರಿದ ಭಾರೀ ಮಳೆಯಿಂದಾಗಿ ಉಪ್ಪುಕಳ ಸಂಪರ್ಕಕ್ಕಾಗಿ ಇದ್ದ ಏಕೈಕ ಮರದ ಪಾಲ ನೀರುಪಾಲಾಗಿದ್ದು ಇಲ್ಲಿನ ನಿವಾಸಿಗಳು ದ್ವೀಪ ವಾಸಿಗಳಾಗಿದ್ದಾರೆ.

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಗತಿಯಾಗಿತ್ತು. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಿದ್ದರು.

ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ,ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವಮಾನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈ ದಾರಿಯಿಲ್ಲದಾಗಿದೆ.
ಜು.9 ರಂದು ಸಂಜೆ ಅಮರ ಸುದ್ದಿ ಹಾಗೂ ಸಮಗ್ರ ವಾಹಿನಿ ತಂಡ ಭೇಟಿ ಮಾಡಿ ಜನರ ಸಮಸ್ಯೆ ಆಲಿಸಿತ್ತು. ಕೆಲವೇ ಗಂಟೆಗಳಲ್ಲಿ ಉಳಿದಿದ್ದ ಏಕೈಕ ಪಾಲ ಉಕ್ಕಿ ಹರಿದ ನೀರಿಗೆ ಕೊಚ್ಚಿ ಹೋಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!