Ad Widget

ಬೆಂಗಳೂರಿನ ಜ್ಞಾನ ಮಂದಾರ ಟ್ರಸ್ಟ್ ವತಿಯಿಂದ ಪ್ರತಿಭೋತ್ಸವ – ಪ್ರಶಸ್ತಿ ಪ್ರಧಾನ ಸಮಾರಂಭ – ಸಾಧಕರನ್ನು ಗುರುತಿಸಿ, ಯುವ ಪ್ರತಿಭೆಗಳನ್ನು ಬೆಳಗುತ್ತಿರುವುದು ಜ್ಞಾನ ಮಂದಾರದ ಮಹತ್ತರ ಸಾಧನೆ : ನ್ಯಾಯಾಧೀಶ ಸೋಮಶೇಖರ್ ಎ.

ಕಲೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಜ್ಞಾನ ಮಂದಿರ ಸಂಸ್ಥೆ ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರತಿಭೆಗಳನ್ನು ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಮಾಜದಲ್ಲಿ ಧಾರ್ಮಿಕ ಗೊಂದಲಗಳು ಕಾಣಿಸುತ್ತಿರುವ ಸಮಯದಲ್ಲಿ ಎಲ್ಲ ಧರ್ಮದವರನ್ನು ಯಾವುದೇ ಬೇಧವಿಲ್ಲದೇ ಗುರುತಿಸಿ ಗೌರವಿಸುತ್ತಿರುವುದು ಅಭಿನಂದನೀಯ. ಧರ್ಮ, ಪ್ರಾಂತೀಯ ಪ್ರತ್ಯೇಕವಾದ ಬೇಡ. ನಾವೆಲ್ಲರೂ ಕನ್ನಡಿಗರು. ಎಲ್ಲರೂ ಒಂದು ಎಂಬ ಭಾವನೆಯಿಂದ ಇರಬೇಕು ಎಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ಹೇಳಿದರು.


ಅವರು ಜೂ.12 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆದ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಮಿತ್ರ ಯುವಕ ಮಂಡಲ ಕೊಯಿಕುಳಿ, ಕುರಲ್ ತುಳು ಕೂಟ ದುಗ್ಗಲಡ್ಕ ಇದರ ಸಹಕಾರದಲ್ಲಿ ಶ್ರೀ ಜ್ಞಾನ ಮಂದಾರ ಟ್ರಸ್ಟ್ (ರಿ) ಬೆಂಗಳೂರು ಇವರು ನೀಡುವ ಕನ್ನಡ ಕಲಾ ಪ್ರತಿಭೋತ್ಸವ -2022, ಸಮಾಜ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪಡೆದ ಡಾ| ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಡಾ|ದೇವಿದಾಸ್ ಕಾಪಿಕಾಡ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಮೀನಾಕ್ಷಿ ಗೌಡ ಸನ್ಮಾನಿಸಿದರು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಗಣ್ಯರಾದ ಕೃಷ್ಣ ಸೋಮಯಾಗಿ (ಧಾರ್ಮಿಕ), ಬಾಲಕೃಷ್ಣ ಭಟ್ ಕೊಡಂಕೇರಿ (ಶಿಕ್ಷಣ), ಸುಬ್ರಹ್ಮಣ್ಯ ಎ.ಯು.(ಶಿಕ್ಷಣ) ಹಸೈನಾರ್ ಜಯನಗರ ( ಮಾಧ್ಯಮ), ರಿಚ್ಚರ್ಡ್ ಕ್ರಾಸ್ತ (ಸಮಾಜಸೇವೆ), ಭೋಜಪ್ಪ ಗೌಡ (ಕೃಷಿ), ನವೀನ್ ಮಚಾದೊ ( ಸಮಾಜ ಸೇವೆ) ಇವರುಗಳನ್ನು ಜ್ಞಾನ ಮಂದಾರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರೆಲ್ಲರಿಗೆ ಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ರವರು ಬೆಳ್ಳಿ ಖಡಗ ತೊಡಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಪಿ.ಜಯರಾಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಲಯನ್ ರಾಜ್ಯಪಾಲ ಎಂ‌.ಬಿ‌.ಸದಾಶಿವ, ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು, ಪುತ್ತೂರಿನ ವೈಷ್ಣವಿ ನಾಟ್ಯಾಲಯದ ಅಧ್ಯಕ್ಷೆ ವಿದುಷಿ ಯೋಗೇಶ್ವರಿ ಜಯಪ್ರಕಾಶ್ , ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ ಬಳ್ಳಾರಿ, ವೆಂಕಟರಮಣ ಸೊಸೈಟಿ ಸಿಇಓ ಡಾ| ಕೆ.ಟಿ.ವಿಶ್ವನಾಥ್, ಜ್ಞಾನ ಮಂದಾರ ಟ್ರಸ್ಟ್ ನಿರ್ದೇಶಕಿ ವಿದುಷಿ ಹರ್ಷಿತ ಎನ್, ದಿನೇಶ್ ಕೊಯಿಕುಳಿ ಉಪಸ್ಥಿತರಿದ್ದರು. ಜ್ಞಾನ ಮಂದಾರ ಸಂಸ್ಥೆಯ ಮುಡಿಪು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಲಾಯಿತು. ಕು.ಪ್ರಣತಿ ಪ್ರಾರ್ಥಿಸಿದರು, ರಮೇಶ್ ನೀರಬಿದಿರೆ ಸ್ವಾಗತಿಸಿ, ಶ್ರೀಮತಿ ನವ್ಯ ದಿನೇಶ್ ವಂದಿಸಿದರು. ಶಿಕ್ಷಕಿ ಸುನೀತ ಎಂ. ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!