Ad Widget

ಕಲ್ಲುಗುಂಡಿಯಲ್ಲಿ ಈ ವರ್ಷದಿಂದ ಫಾತಿಮಾ ಮಹಿಳಾ ಶರೀಅತ್ ಕಾಲೇಜು ಆರಂಭ

ಪಿ.ಯು.ಸಿ ಕೋರ್ಸ್ ಜೊತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಪಡಿಸಿದ ಪಾಳಿಲಾ ” ಬಿರುದು ನೀಡುವ ಶರೀಅತ್ ಕಾಲೇಜು ಕಲ್ಲುಗುಂಡಿ ಜುಮಾ ಮಸೀದಿಯನ್ನು ಕೇಂದ್ರೀಕರಿಸಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವುದರ ಕುರಿತು ಮೇ.7 ರಂದು ಪತ್ರಿಕಾ ಗೋಷ್ಠಿ ನಡೆಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ತಾಜಾ ಮಹಾಮ್ಮದ್ ಮಾತಾಡಿ, ಶಿಕ್ಷಣ ರಂಗದಲ್ಲಿ ಮುಸ್ಲಿಂ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಧಾರ್ಮಿಕ ಬೌದ್ಧಿಕ ಸಮನ್ವಯ ಶಿಕ್ಷಣ ಪದ್ಧತಿಯು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಸಕ್ತಿ ಪಡೆಯುತ್ತಿದೆ . ಸ್ತ್ರೀಯು ಪ್ರಧಾನ ಪಾತ್ರ ವಹಿಸುವ ಕುಟುಂಬ ವ್ಯವಸ್ಥೆ ಹೊಂದಿರುವ ನಮ್ಮ ಸಮಾಜದಲ್ಲಿ ಮಹಿಳೆಯರು ಶಾಲಾ ಕಾಲೇಜು ಶಿಕ್ಷಣ ಪಡೆಯುವುದರ ಜೊತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಪರಿಜ್ಞಾನ ಹೊಂದಬೇಕಾಗಿರುವುದು ಅನಿವಾರ್ಯವಾಗಿದೆ . ಈ ನಿಟ್ಟಿನಲ್ಲಿ ಪಿ.ಯು.ಸಿ ಕೋರ್ಸ್ ಜೊತೆಗೆ ಧಾರ್ಮಿಕ, ನೈತಿಕ ಮತ್ತು ಕೌಟುಂಬಿಕ ವಿಷಯಗಳನ್ನು ಒಳಪಡಿಸಿದ ಫಾಳಿಲಾ ” ಬಿರುದು ನೀಡುವ ಶರೀಅತ್ ಕಾಲೇಜು ಕಲ್ಲುಗುಂಡಿ ಜುಮಾ ಮಸೀದಿಯನ್ನು ಕೇಂದ್ರೀಕರಿಸಿ ಈ ಬಾರಿಯ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರ ಜೊತೆಗೆ ಈ ಶರೀಅತ್ ಕೋರ್ಸ್ ಕಲಿಯಲು ಅವಕಾಶ ಕಲ್ಪಿಸಲಾಗಿದೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸುರಕ್ಷಿತ ಮತ್ತು ಶೈಕ್ಷಣಿಕ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದ್ದು ಅದಕ್ಕಾಗಿ ಪ್ರತ್ಯೇಕ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸಂತಾರ್ ಉಬ್ಬಾಸ್ , ಪ್ರದಾನ ಕಾರ್ಯದರ್ಶಿ ಎ.ಕೆ. ಹಸೈನಾರ್ , ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!