Ad Widget

ಎನ್ನೆಂಸಿ: ಗ್ಲೋಬಲ್ ರಿಸೈಕ್ಲಿಂಗ್ ಡೇ ಆಚರಣೆ – ವಸ್ತುಗಳ ಮರುಬಳಕೆಯ ಮೂಲಕ ತ್ಯಾಜ್ಯದ ನಿವಾರಣೆ ಹಾಗೂ ಸಂಪನ್ಮೂಲದ ಉಳಿಕೆ : ಬಾಲಕೃಷ್ಣ ಬೊಳ್ಳೂರು

ವಸ್ತುಗಳ ಬಳಕೆಯಿಂದ ಉಂಟಾಗುವ ತ್ಯಾಜ್ಯಗಳು ಸಮಸ್ಯೆಯಾಗಿ ಪರಿಣಮಿಸುತ್ತವೆ, ಅದರ ಮರುಬಳಕೆಯಿಂದ ತ್ಯಾಜ್ಯದ ನಿವಾರಣೆಯ ಜೊತೆಗೆ ಸಂಪನ್ಮೂಲದ ಉಳಿಕೆಯಾಗುತ್ತದೆ.ಯಾವುದೇ ವಸ್ತುಗಳ ಬಳಕೆ ಮಾಡುವ ಸಂದರ್ಭದಲ್ಲಿ ಅದರ ತ್ಯಾಜ್ಯವನ್ನು ಮರು ಬಳಕೆ ಮಾಡುವುದನ್ನು ತಿಳಿದಿರಬೇಕು ಎಂದು ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಅಭಿಪ್ರಾಯಪಟ್ಟರು.ಅವರು ಮಾರ್ಚ್ 18 ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ‌...

ಸಹಕಾರಿ ಧುರೀಣ ಸೀತಾರಾಮ ರೈ ಸವಣೂರು ಅವರಿಗೆ ಸಹಕಾರ ರತ್ನ ಪ್ರಶಸ್ತಿ

ಹಿರಿಯ ಸಹಕಾರಿ ಧುರೀಣ ಹಾಗೂ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಕೆ. ಸೀತಾರಾಮ ರೈ ಸವಣೂರು ಇವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರು ಈ ವಿಚಾರವನ್ನು ಪ್ರಕಟಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾ.20 ರಂದು ಬೆಂಗಳೂರಿನ ಕೆಂಗೇರಿ ಉಪನಗರದ ಗಣೇಶ...
Ad Widget

ಸೇವಾಜೆ : ಅಸಂಕ್ರಾಮಿಕ ರೋಗಗಳ ಆರಂಭಿಕ ಪತ್ತೆ ಹಾಗೂ ಆರೋಗ್ಯ ತಪಾಸಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ ಇದರ ಎಲಿಮಲೆ ಉಪಕೇಂದ್ರ ವತಿಯಿಂದ ಮಾ. 17 ರಂದು ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ಅಸಂಕ್ರಾಮಿಕ ರೋಗಗಳ ಆರಂಭಿಕ ಪತ್ತೆ ಬಗ್ಗೆ ಮಾಹಿತಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಕು.ಮೋನಿಷಾ ಇವರು ಮಾಹಿತಿ...

ಸುಬ್ರಹ್ಮಣ್ಯ :ದಿ.ಕೃಷ್ಣಕುಮಾರ್ ರುದ್ರಪಾದ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ನಲವತ್ತು ವರ್ಷಗಳ ಇತಿಹಾಸ ಹೊಂದಿರುವ ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ವತಿಯಿಂದ ದಿ.ಕೃಷ್ಣಕುಮಾರ್ ರುದ್ರಪಾದ ಅವರ ಸ್ಮರಣಾರ್ಥ ಮಾ.19 ಮತ್ತು ಮಾ.20 ರಂದು ಕುಮಾರಧಾರ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಪ್ರತಿಷ್ಠಿತ 20 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗಾಂಗೇಯ ಟ್ರೋಫಿ 2022 ನಡೆಯಲಿದ್ದು,ಮಾ.19 ರಂದು ಬೆಳಿಗ್ಗೆ...

ರಂಗಸ್ಥಳದಲ್ಲಿ ಕುಸಿದು ಬಿದ್ದು ಗಾಯಗೊಂಡ ಜಯಾನಂದ ಸಂಪಾಜೆ – ಸಹಾಯ ಮಾಡುವಂತೆ ಯಕ್ಷಗಾನ ಅಭಿಮಾನಿಗಳಲ್ಲಿ ಮನವಿ

ಜಯಾನಂದ ಸಂಪಾಜೆಯಾದ ನಾನು ಈ ವರ್ಷದ ತಿರುಗಾಟದಲ್ಲಿ ಬಪ್ಪನಾಡು ಮೇಳದಲ್ಲಿ ಕಲಾವಿದನಾಗಿದ್ದೇನೆ. ದಿನಾಂಕ 17.02.2022 ರಂದು ನಾರಾವಿಯಲ್ಲಿ ಬಪ್ಪನಾಡು ಮೇಳದವರಿಂದ " ನಾಗತಂಬಿಲ " ತುಳು ಯಕ್ಷಗಾನ ಪ್ರದರ್ಶನದಲ್ಲಿ ನನ್ನದು ಕಥಾನಕದ ಧನರಾಜ ಎಂಬ ನಾಯಕನ ಪಾತ್ರ . ಈ ಸಂದರ್ಭದಲ್ಲಿ ಧಿಗಿಣ ತೆಗೆಯುವಾಗ ನಾನು ರಂಗಸ್ಥಳದಲ್ಲೇ ಕುಸಿದು ಬಿದ್ದೆ .ಕಾಲಿನಲ್ಲಿ ತೀವ್ರವಾದ ನೋವಿದ್ದರೂ ಸಾವರಿಸಿಕೊಂಡು...

ಸಂಪಾಜೆ : ಹೊಳೆಗೆ ಉರುಳಿ ಬಿದ್ದ ಬಸ್ – ಹಲವಾರು ಮಂದಿಗೆ ಗಾಯ

ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸು ರಸ್ತೆಯ ಬದಿಯ ಹೊಳೆಗೆ ಉರುಳಿ ಬಿದ್ದಿದ್ದು ಬಸ್ಸಲ್ಲಿದ್ದ ಹಲವಾರು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್ ನ ಎದುರಿನ ಟಯರ್ ಒಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಸುಳ್ಯ : ಬಿಕೋ ಎನ್ನುತ್ತಿರುವ ಗಾಂಧಿನಗರ – ಬಂದ್ ಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮ್ ಸಮುದಾಯ

ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತ ಬಂದಿರುವ ತೀರ್ಪಿನ ಕುರಿತು, ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆಗಳು ಇಂದು ಸ್ವಯಂಪ್ರೇರಿತ ಬಂದ್ ಕರೆ ನೀಡಿದ್ದು ಸುಳ್ಯದಲ್ಲೂ ಕೂಡ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.ಸುಳ್ಯದ ಗಾಂಧಿನಗರ ಸಂಪೂರ್ಣ ಬಿಕೋ ಎನ್ನುತ್ತಿದೆ. ಬಾಳೆಮಕ್ಕಿ, ಶ್ರೀರಾಮ ಪೇಟೆ, ಹಳೆಗೇಟು, ಪೈಚಾರು, ಕುರುಂಜಿಭಾಗ್, ಜೂನಿಯರ್ ಕಾಲೇಜು ರಸ್ತೆ ಸೇರಿದಂತೆ...

ಮಾ 17 : ಕರ್ನಾಟಕ ಬಂದ್ ಕರೆಗೆ ಸುಳ್ಯ ತಾಲೂಕು ಮುಸ್ಲಿಮ್ ಒಕ್ಕೂಟ ಬೆಂಬಲ – ಇಕ್ಬಾಲ್ ಎಲಿಮಲೆ

ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ಮತ್ತು ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಒಪ್ಪುಲು ಸಾಧ್ಯವಿಲ್ಲ, ಇದನ್ನು ನ್ಯಾಯಾಲಯ ಮರುಪರಿಶೀಲಿಸಿಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ಮಾ. 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿದ್ದು, ಈ...

ಮಾ.20: ವೆಂಕಟರಮಣ ಸೊಸೈಟಿಯ 17ನೇ ಮಡಂತ್ಯಾರು ಶಾಖೆ ಉದ್ಘಾಟನೆ

ಬೆಳ್ತಂಗಡಿ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ 17ನೇ ಮಡಂತ್ಯಾರು ಶಾಖೆಯು ಮಡಂತ್ಯಾರು ಕಾಲೇಜು ರಸ್ತೆಯಲ್ಲಿರುವ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಮಾ.20ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮರವರು ತಿಳಿಸಿದರು. ಅವರು ಮಾ.16ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 1997ರಲ್ಲಿ ಗೌಡರ ಸೇವಾ ಸಂಘ ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟ ನಮ್ಮ...

ಮಾ.18-19 ರಂದು ಮಾವಿನಕಟ್ಟೆಯಲ್ಲಿ ಒತ್ತೆಕೋಲ ಮಹೋತ್ಸವ

ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದೆ.ಮಾ.18 ರಂದು ಬೆಳಿಗ್ಗೆ ಗಂಟೆ 6 ರಿಂದ ಗಣಪತಿ ಹವನ, 7 ಗಂಟೆಗೆ ಮೇಲೆರಿ ಕಾರ್ಯಕ್ರಮ, 8.30 ಕ್ಕೆ ಅಶ್ವತ್ಥ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ...
Loading posts...

All posts loaded

No more posts

error: Content is protected !!