ಅರೆಭಾಷೆಯಲ್ಲಿ ಉತ್ತಮ ಚಲನ ಚಿತ್ರಗಳು ನಿರ್ಮಾಣಗೊಳ್ಳುವುದು ಭಾಷೆಯ ಬೆಳವಣಿಗೆಗೆ ಪೂರಕ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಹೇಳಿದ್ದಾರೆ. ಸುಳ್ಯದ ಕನ್ನಡ ಭವನದಲ್ಲಿ ಮಾ.6ರಂದು ನಡೆದ ಸಮಾರಂಭದಲ್ಲಿ ಕಲಾಮಾಯೆ ಸಂಸ್ಥೆ ಸಾರಥ್ಯದಲ್ಲಿ ನಿರ್ಮಾಣಗೊಂಡ ಸುಧೀರ್ ಏನೆಕಲ್ ನಿರ್ದೇಶಿಸಿ ನಟಿಸಿರುವ ‘ಕೇಸ್ ಪುಸ್ಕ’ ಅರೆಭಾಷೆ ಚಲನ ಚಿತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಚಲನಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ತೇಜಕುಮಾರ್ ಬಡ್ಡಡ್ಕ ಮಾತನಾಡಿ ‘ಡಿಜಿಟಲ್ ಯುಗದಲ್ಲಿ ಅರೆಭಾಷೆಯ ಬೆಳವಣಿಗೆಗೆ ಚಲನಚಿತ್ರಗಳು ದೊಡ್ಡ ಕೊಡುಗೆ ನೀಡಲಿದೆ ಎಂದರು. ಸಿನಿಮಾದ ನಿರ್ದೇಶಕ ಸುಧೀರ್ ಏನೆಕಲ್ಲು ಮಾತನಾಡಿ ಎಲ್ಲರ ಪ್ರಯತ್ನದ ಫಲವಾಗಿ ಚಿತ್ರ ಮೂಡಿ ಬಂದಿದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಲನಚಿತ್ರ ಪ್ರದರ್ಶನಗೊಂಡಿತು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್, ಕಥೆಗಾರ ಕೆ.ಆರ್.ವಿದ್ಯಾಧರ ಬಡ್ಡಡ್ಕ, ಎ.ಕೆ.ಹಿಮಕರ, ಸಂಜೀವ ಕುದ್ಪಾಜೆ, ಡಾ. ಸಾಯಿಗೀತಾ ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ, ಲೋಕೇಶ್ ಊರುಬೈಲು ಮತ್ತಿತರರು ಭಾಗವಹಿಸಿದ್ದರು. ಕೇಸ್ ಪುಸ್ಕ ಸಿನಿಮಾದ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಸುಧೀರ್ ಏನೆಕಲ್ ನಿರ್ವಹಿಸಿದ್ದು ಛಾಯಾಗ್ರಾಹಕರಾಗಿ ಯಕ್ಷಿತ್ ಸಿ. ಕಲ್ಲುಗುಂಡಿ, ಪುಷ್ಪರಾಜ್ ಏನೆಕಲ್, ಗೀತೆ ಸಂಗೀತ ಬಿ. ಎಸ್. ಕಾರಂತ್ ಇಂಚರ ಮ್ಯೂಸಿಕಲ್ಸ್ ರಾಮಕುಂಜ, ಸಂಕಲನ ಗಿರೀಶ್ ಆಚಾರ್ಯ, ಜೀವನ್ ಕೆರೆಮೂಲೆ, ಗಾಯನ ಜಯಂತ್ ಮೆತ್ತಡ್ಕ, ತಂಡದ
ಕಲಾವಿದರಾಗಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಸುಜಾತ ಗಣೇಶ್ ಸುಬ್ರಮಣ್ಯ, ರಾಮಚಂದ್ರ ಸುಬ್ರಮಣ್ಯ, ಪ್ರಸಾದ್ ಕಾಟೂರು, ಮಿಥುನ್ ಕುಮಾರ್ ಸೋನ, ಸುಶ್ಮಿತಾ ಮೋಹನ್ ಬೆಳ್ಳಿಪ್ಪಾಡಿ, ಜೀವನ್ ಕೆರೆಮೂಲೆ, ಯೋಗಿತಾ ಬಂಗಾರ್ ಕೋಡಿ, ಅರ್ಪಿತಾ ಕೇನಡ್ಕ, ವಿಜಯ್ ಕುಮಾರ್ ದೆಂಗೋಡಿ, ಶಮಂತ್ ಕುದುರೆ ಮಜಲು, ಸೌಂದರ್ಯ ಮರ್ದಳ, ಹಿತೇಶ್ ಕಾರ್ಜ, ಅನನ್ಯ ಸುಬ್ರಮಣ್ಯ.ಚೇತನ್ ಗಬ್ಬಲಡ್ಕ, ದೀಕ್ಷಿತ್ ಪೀಚೆಮನೆ ಸುಜಿತ್ ಕಾಯರ, ಜೀವನ್ ಸಂಕಡ್ಕ,ಚರಣ್ ಸಂಕಡ್ಕ, ಮೋಕ್ಷಿತ್ ತಿಮ್ಮಯ್ಯ ಮಡಿಕೇರಿ, ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ವಹಣೆ ಯಲ್ಲಿ ರಾಧಿಕಾ ಪ್ರೀತಮ್ ಏನೆಕಲ್ ಸಹಕರಿಸಿದ್ದಾರೆ.
ಅರೆಭಾಷೆ ಚಿತ್ರರಂಗ ಕ್ಕೆ ನೂತನ ಕಾಣಿಕೆಯಾಗಿ ಹೊರಬಂದ “ಕೇಸ್ ಪುಸ್ಕ”
ಚಿತ್ರವು ಅರೆಭಾಷೆ ಭಾಷಾ ಬೆಳವಣಿಗೆಗೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆಗೆ ಹೊಸ ಆಯಾಮದ ತಿರುವು ನೀಡಿದೆ
ಗ್ರಾಮೀಣ ಸೊಗಡಿನ ಪದ ಬಳಕೆಯ “ಕೇಸ್ ಪುಸ್ಕ” ಎಂಬ ಶೀರ್ಷಿಕೆ ಕರಾವಳಿ ಕಲಾಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದ್ದು ಹಾಸ್ಯ ಮತ್ತು ಕಥಾ ಸಂಭಾಷಣೆ ಹೆಣೆದು ಕಟ್ಟಿದ ಕಥೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಮೂಲಕ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.