
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ವರ್ತಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವರ್ತಕ ಸಮುದಾಯ ಭವನದಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಅವರು ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭ ವರ್ತಕ ಸಂಘದ ಪ್ರಮುಖರಾದ ಪ್ರಭಾಕರ್ ನಾಯರ್, ಆದಂ ಕುಂಞಿ ಕಮ್ಮಾಡಿ, ಗಿರೀಶ್ ಡಿ.ಎಸ್, ಬಾಲಚಂದ್ರ ರಾವ್, ಗಣೇಶ್ ಭಟ್, ಸುರೇಶ್ ಪ್ರಮುಖರಾದ ಉಜ್ವಲ್ ಎಂ.ಜೆ, ಭವಾನಿಶಂಕರ ಅಡ್ತಲೆ, ಹಮೀದ್ ಜನತಾ, ಜಯಂತ್ ಶೆಟ್ಟಿ, ಬಿ.ಟಿ ಮಾಧವ ಮೊದಲಾದವರು ಉಪಸ್ಥಿತರಿದ್ದರು.