ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ವತಿಯಿಂದ ಭಜನಾ ತರಬೇತಿ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಭಜನಾ ತರಬೇತಿಯ ಎರಡನೇ ದಿನವಾದ ಇಂದು(ಡಿ.12) ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ಸದಸ್ಯರಾದ ನಾರಾಯಣ ಕಳಂಜ ಮತ್ತು ಗಿರಿಧರ ಕಳಂಜ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಜನೆ ತರಬೇತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು.

. . . . . . . . .


ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಅಧ್ಯಕ್ಷರಾದ ಲೋಕೇಶ್ ಬೆಳ್ಳಿಗೆ ಮಾಡಿದರು. ಸಾರ್ವಜನಿಕ ದೇವತಾರಾಧನ ಸಮಿತಿ ಬಾಳಿಲ ಮುಪ್ಪೇರ್ಯ ಇದರ ಗೌರವಾಧ್ಯಕ್ಷರಾದ ರಾಧಾಕೃಷ್ಣ ರಾವ್ ಉಡುವೆಕೋಡಿ ಸಂಪನ್ಮೂಲಗಳನ್ನು ಶಾಲು ಹೊದಿಸಿ ಹಾರ ಹಾಕಿ ಹಣ್ಣು-ಹಂಪಲು, ಸ್ಮರಣಿಕೆ ನೀಡಿ ಗೌರವಿಸಿದರು.

. . . . . . .

ವೇದಿಕೆಯಲ್ಲಿ ತಂಡದ ನಾಯಕ ಕರುಣಾಕರ್ ಮುಪ್ಪೇರಿಯ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ರಘುರಾಮ್ ಕೋಟೆಬನ ಸ್ವಾಗತಿಸಿ, ತಂಡದ ಉಪನಾಯಕ ರಮೇಶ್ ಮುಪ್ಪೇರ್ಯ ವಂದಿಸಿದರು. ಸುಮಾರು 55 ಭಜನಾರ್ಥಿಗಳು ಭಜನಾ ತರಬೇತಿಯಲ್ಲಿ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading