ಮರ್ಕಂಜ ಗ್ರಾಮದಲ್ಲಿ ಬಹುದಿನಗಳಿಂದ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಅದರ ಗಂಭೀರತೆಯನ್ನು ಮೋದಿ ಅವರಿಗೆ ಅರ್ಥೈಸಲು SEND EMAIL TO PM ಎಂಬ ಪತ್ರ ಚಳುವಳಿ
ಕಾರ್ಯಕ್ರಮ ಹಮ್ಮಿಕೊಳ್ಳಲು ಮರ್ಕಂಜದ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮದ ಪ್ರತಿ ಮನೆಯನ್ನು ಸಂಪರ್ಕಿಸಿ ಇಮೇಲ್ ಐಡಿ ಹೊಂದಿದವರನ್ನು ಗುರುತಿಸಿ ಚಳುವಳಿಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದಾರೆ. ಸೆ.22 ರಂದು ಸಂಜೆ 5 ಗಂಟೆಗೆ ರೆಂಜಾಳ ವಿನಾಯಕ ಸಭಾಭವನದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಶಾಸ್ತಾವು ಯುವಕ ಮಂಡಲ ರೆಂಜಾಳ ಹಾಗೂ ಗ್ರಾ.ಪಂ. ಸದಸ್ಯ ಕೋಡಿ ಚಿತ್ತರಂಜನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- May 16th, 2024