ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಅದೆಷ್ಟೋ ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಈ ಜಿಲ್ಲೆಗೆ 13 ದಿನಗಳ ಸ್ವಾತಂತ್ರ್ಯದ ಸವಿಯನ್ನು ನೀಡಿದ ಕೀರ್ತಿ ನಮ್ಮ ಸುಳ್ಯದ ಹಿರಿಯರಿಗೆ ಸಲ್ಲುತ್ತದೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ಅವರ ತ್ಯಾಗ, ಬಲಿದಾನಗಳನ್ನು ಶಾಶ್ವತವಾಗಿ ನೆನಪಿಸುವುದಕ್ಕಾಗಿ ಬೆಳ್ಳಾರೆಯಲ್ಲಿ ಮತ್ತು ಉಬರಡ್ಕದ ಕೆದಂಬಾಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಸ್ಮಾರಕಗಳನ್ನು ನಿರ್ಮಿಸಲು ಕಟಿಬದ್ಧನಾಗಿದ್ದೇನೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ಭರವಸೆ ನೀಡಿದರು.
ಅವರು ಶುಕ್ರವಾರ ಬೆಳ್ಳಾರೆಯ ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಅಮರ ಸ್ವಾತಂತ್ರ್ಯ ಪಂಜು ಬೆಳಗಿಸಿ ಮಾತನಾಡಿದರು. ಪ್ರಮುಖ ಭಾಷಣ ಮಾಡಿದ ರಂಗ ಕಲಾವಿದ ಜೀವನ ರಾಂ ಸುಳ್ಯ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದೇ ಹೋರಾಟಕ್ಕಿಳಿದ ನಮ್ಮ ಹಿರಿಯರ ಕೆಚ್ಚು ಮತ್ತು ರೋಷವನ್ನು ನೋಡಿ ಬ್ರಿಟಿಷರು ಹೆದರಿ ಪಲಾಯನ ಮಾಡಿದ್ದು ಒಂದು ಮರೆಯಲಾಗದ ಇತಿಹಾಸ. ನಮ್ಮ ಹಿರಿಯರ ಈ ಸಾಹಸದ ಸ್ಮಾರಕ ರಚಿಸಬೇಕಾದುದು ಅತೀ ಅವಶ್ಯ ಎಂದರು. ವೇದಿಕೆಯಲ್ಲಿ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಪನ್ನೆ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಗಣ್ಯರಾದ ಗೋಪಾಲಕೃಷ್ಣ ಭಟ್, ಎಂ.ಪಿ.ಉಮೇಶ್, ಮೋಹನ ರಾಂ ಸುಳ್ಳಿ, ಆನಂದ ಪೂಜಾರಿ, ಬಿ.ಕೆ. ಮಾಧವ, ಪ್ರಭಾಕರ ನಾಯರ್, ಡಾ.ಹರಪ್ರಸಾದ್ ತುದಿಯಡ್ಕ, ಸುಧಾಕರ ರೈ, ಪದ್ಮನಾಭ ಬೀಡು,ನಾರಾಯಣ ಕೇಕಡ್ಕ, ಸಂತೋಷ್ ಮುಂಡಕಜೆ, ಅನಿಲ್ ಪೂಜಾರಿಮನೆ, ಶರತ್ ಪರಿವಾರಕಾನ,ಪತಂಜಲಿ ಭಾರದ್ವಾಜ್, ಹೇಮಂತ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ಸುಬೋಧ್ ರೈ, ಚಂದ್ರಾ ಕೋಲ್ಚಾರ್, ಎ.ಟಿ. ಕುಸುಮಾಧರ, ಸೀತಾರಾಮ ಪುರುಷೋತ್ತಮ ಕಿರ್ಲಾಯ ಮತ್ತಿತರರಿದ್ದರು. ಸಂಘಟಕರಲ್ಲಿ ಓರ್ವರಾದ ವೆಂಕಟ್ ದಂಬೆಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದ್ಮನಾಭ ಪೆರುವಾಜೆ ವಂದಿಸಿದರು.
- Thursday
- October 31st, 2024