- Wednesday
- December 4th, 2024
ಅರಂತೋಡು ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ದೇರಾಜೆ, ಗ್ರಾ.ಪಂ. ಸದಸ್ಯರು, ವಾಹನ ಮಾಲಕ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.
ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಕೊಡಗು ಇದರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ (ರಿ)ಊರುಬೈಲು ಇವರಿಂದ ಜು.7 ರಂದು ಸಂಪಾಜೆಯಲ್ಲಿ ವನಮಹೋತ್ಸವ ಆಚರಣೆ ಮಾಡಲಾಯಿತು. ಸಂಪಾಜೆ ಗೇಟ್ ಬಳಿಯ ಮುಖ್ಯ ರಸ್ತೆಯ ಅಂಚಿನಲ್ಲಿ ಕಳೆನಾಶ ಮಾಡಿ ,ಪ್ಲಾಸ್ಟಿಕ್ ತ್ಯಾಜ್ಯ ಆಯುವ ಮೂಲಕ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು. ಆ ಬಳಿಕ ರಸ್ತೆಯ ಅಂಚಿನುದ್ದಕ್ಕೂ ಸಸಿಗಳನ್ನು...
ಕಳಂಜ ಗ್ರಾಮದಲ್ಲಿ ಸರ್ಕಾರದಿಂದ ನೀಡಲಾಗಿದ್ದ ಕಾರ್ಮಿಕರ ಕಿಟ್ ವಿತರಿಸಲಾಯಿತು. ಕಾರ್ಮಿಕ ಇಲಾಖೆಯ ಅಧೀನದಲ್ಲಿ ನೋಂದಾಯಿತ ಕಾರ್ಮಿಕರ ಮನೆ ಮನೆಗೆ ತೆರಳಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯ ಬಾಲಕೃಷ್ಣ ಬೇರಿಕೆ ಮತ್ತಿತರರು ಹಾಜರಿದ್ದರು. ಕಳಂಜ ಗ್ರಾಮದ ಒಟ್ಟು 57 ಮಂದಿಗೆ ಸರ್ಕಾರ ನೀಡಿದ ಕಾರ್ಮಿಕರ ಕಿಟ್ ವಿತರಿಸಲಾಯಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.೨೧ರಿಂದ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೋವಿಡ್-೧೯ ಇಳಿಮುಖಗೊಂಡಿರುವುದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಸೋಮವಾರದಿಂದ ಅವಕಾಶ ಲಭ್ಯವಾಗಿದೆ. ಕ್ಷೇತ್ರದಲ್ಲಿ ಶ್ರೀ ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ...
ಸುಳ್ಯ ಕಾಂಗ್ರೆಸ್ ಸೇವಾದಳ, ನಗರ ಕಾಂಗ್ರೆಸ್ ಮತ್ತು ಬೋರುಗುಡ್ಡೆ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ಸುಳ್ಯ ನಗರದ ಬೋರುಗುಡ್ಡೆ ನಾವೂರು ಪ. ಜಾತಿ ಕಾಲೋನಿಯ ಮೀಸಲು ಹಿಂದೂ ರುದ್ರ ಭೂಮಿ ಯಲ್ಲಿ ಶ್ರಮದಾನದ ಮೂಲಕ ಕಾಡು ಕಡಿದು ಸ್ವಚ್ಛತೆ ಕಾರ್ಯ ಮಾಡಲಾಯಿತು. ನಂತರ ಸ್ಥಳದಲ್ಲಿ ಗಿಡ ನೆಡಲಾಯಿತು. ಶ್ರಮದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ...
ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರಿಗೆ ಜು.3 ರಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಭಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಭಡ್ತಿ ಎದುರಿಸುತ್ತಿರುವ ಶಿಕ್ಷಕರು ಹಾಜರಿದ್ದರು.
ಗುತ್ತಿಗಾರು ಚರ್ಚ್ ವತಿಯಿಂದ ರಿಕ್ಷಾ ಚಾಲಕರಿಗೆ ವೈದ್ಯಕೀಯ ಪರಿಕರಗಳಾದ ಸ್ಯಾನಿಟೈಸರ್, ಸ್ಪ್ರೇ ಸ್ಯಾನಿಟೈಸರ್,25 ಫೇಸ್ ಮಾಸ್ಕ್, ಮತ್ತು ಆರೋಗ್ಯ ವರ್ಧಕ ಗುಳಿಗೆ ಒಳಗೊಂಡ ಕಿಟ್ಟನ್ನು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್ ವಿತರಣೆ ಮಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗುತ್ತಿಗಾರು ಸರಕಾರಿ ಆಸ್ಪತ್ರೆಯ ಡಾ. ಚೈತ್ರ ಬಾನು, ಸಿರಿಯಾಕ್ ಮ್ಯಾಥ್ಯೂ, ಲಿಜೋ ಜೋಸ್, ಜಾರ್ಜ್. ಕೆ. ಎಂ.,...
ನಾಲ್ಕೂರು ಶಿರಾಡಿ ದೈವಸ್ಥಾನದ ರಸ್ತೆ , ಕಲ್ಲಾಜೆ, ಅಂಬೆಕಲ್ಲು, ಹಲ್ಗುಜಿ ರಸ್ತೆ ಶ್ರಮದಾನ ಜು.2 ರಂದು ನಡೆಯಿತು. ಈ ಸಂದರ್ಭದಲ್ಲಿ ಮೇಘನ್ ಕಲ್ಲಾಜೆ, ಸುಬ್ರಹ್ಮಣ್ಯ ಪಾಲ್ತಾಡು, ಸತೀಶ್ ಹಲ್ಗುಜಿ ಶಿವಪ್ರಸಾದ್ ಹಲ್ಗುಜಿ, ರಾಮಚಂದ್ರ ಕಲ್ಲಾಜೆ, ಪುರುಷೋತ್ತಮ ಪುನೇರಿ, ನಾಗೇಶ್ ಮಣಿಯಾನ ಮನೆ, ಪ್ರಶಾಂತ್ ಅಂಬೆಕಲ್ಲು, ಷಣ್ಮುಖ ಅಂಬೆಕಲ್ಲು, ಮನೋಜ್ ದೇರಪಜ್ಜನ ಮನೆ, ಕುಶಾಲಪ್ಪ ಗೌಡ ಅಂಬೆಕಲ್ಲು,...
ಸುಳ್ಯ ತಾಲೂಕು ಪಂಚಾಯಿತ್ ವತಿಯಿಂದ ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಅಂಬೆಟಡ್ಕದಲ್ಲಿ ನೀಡಿರುವ ನಿವೇಶನದಲ್ಲಿ ಜು.3 ರಂದು ನೂತನ ಪ್ರೆಸ್ ಕ್ಲಬ್ ಕಟ್ಟಡ ಮತ್ತು ಪತ್ರಕರ್ತರ ಸಮುದಾಯ ಭವನಕ್ಕೆ ಶಿಲಾನ್ಯಾಸ ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ನಿವೇಶನ...
Loading posts...
All posts loaded
No more posts