


ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ ವರದಿ ವಾಚಿಸಿದರೆ, ಕೋಶಾಧಿಕಾರಿ ಲೋಕೇಶ್ ಗುಡ್ಡೆಮನೆ ಲೆಕ್ಕಪತ್ರ ಮಂಡಿಸಿದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗಂಗಾಧರ ಕಲ್ಲಪಳ್ಳಿ, ಲೋಕೇಶ್ ಪೆರ್ಲಂಪಾಡಿ, ಸಂಘದ ಗೌರವಾಧ್ಯಕ್ಷ ಮುರಳೀಧರ ಅಡ್ಡನಪಾರೆ ವೇದಿಕೆಯಲ್ಲಿದ್ದರು.
2021-22 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಪದ್ಮನಾಭ ಮುಂಡೋಕಜೆ, ಕಾರ್ಯದರ್ಶಿ ಯಾಗಿ ಗಣೇಶ್ ಮಾವಂಜಿ, ಕೋಶಾಧಿಕಾರಿಯಾಗಿ ದಯಾನಂದ ಕೊರತ್ತೋಡಿ, ಗೌರವಾಧ್ಯಕ್ಷರಾಗಿ ಕೃಷ್ಣ ಬೆಟ್ಟ ಹಾಗೂ ನಿರ್ದೇಶಕರು ಗಳು,ಸಲಹೆಗಾರರನ್ನು ಆಯ್ಕೆ ಮಾಡಲಾಯಿತು.