

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಪ್ರಸಿದ್ಧ ಚಿತ್ರ ಕಲಾವಿದ, ರಂಗ ನಿರ್ದೇಶಕ ಮೋಹನ್ ಸೋನಾ ರ ಸಾಕ್ಷ್ಯ ಚಿತ್ರ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಜೀವನ್ ರಾಂ ರಂಗಮನೆ, ಸುಬ್ರಾಯ ಚೊಕ್ಕಾಡಿ, ಡಾ.ಚಿನ್ನಪ್ಪ ಗೌಡ ಅಕಾಡೆಮಿ ಸದಸ್ಯರಾದ ಕುಸುಮಾಧರ ಎ.ಟಿ., ಪುರುಷೋತ್ತಮ ಕಿರ್ಲಾಯ, ಡಾ. ವಿಶ್ವನಾಥ ಬದಿಕಾನ, ಎಂ.ಎಸ್. ಜಯಪ್ರಕಾಶ್, ಡಾ. ಪುರುಷೋತ್ತಮ ಗೌಡ ಕರಂಗಲ್ಲು, ಸ್ಮಿತಾ ಅಮೃತರಾಜ್, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು, ಉಪಸ್ಥಿತರಿದ್ದರು.