ಕೋನಡ್ಕಪದವು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ರಚಿಸುವ ಬಗ್ಗೆ ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ ಜು.27ರಂದು ಸಭೆ ನಡೆಯಿತು.
ಈ ಸಭೆಯಲ್ಲಿ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ನಿರ್ದೇಶಕರುಗಳಾದ ಎಸ್.ಟಿ. ಜಯರಾಮ ರೈ, ನಾರಾಯಣ ಪ್ರಕಾಶ್ ಹಾಗೂ ಉಪವ್ಯವಸ್ಥಾಪಕರಾದ ಡಾ.ಸತೀಶ್ ರಾವ್ ಮತ್ತು ವಿಸ್ತರಣಾ ಅಧಿಕಾರಿ ನಾಗೇಶ್‌ರವರು ಭಾಗವಹಿಸಿ ಮಾಹಿತಿಯನ್ನು ನೀಡಿದರು.
ನಂತರ ನೂತನವಾಗಿ ಕೋನಡ್ಕಪದವು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಉಪಾಧ್ಯಕ್ಷರಾಗಿ ವಸಂತಿ ಬೊಳುಬೈಲು, ಕಾರ್ಯದರ್ಶಿಯಾಗಿ ಜಯಶ್ರೀ ಶ್ರೀನಿವಾಸ ಬೈತಡ್ಕ, ನಿರ್ದೇಶಕರುಗಳಾಗಿ ಸಾವಿತ್ರಿ ಗೋಪಾಲ ಅಡ್ಕಾರು, ವೀಣಾ ಹರಿಪ್ರಕಾಶ್, ವಿಜಯ ಗಂಗಾಧರ್ ಕಾಳಮನೆ, ಭವಿತ ಪದವು, ಸಂಧ್ಯಾ ವಾಗ್ಲೆ ಅಡ್ಕಾರು, ಮಾಧವಿ ವಿನೋಬಾನಗರ, ವನಜಾಕ್ಷಿ ಅಡ್ಕಾರು, ಗೀತಾ ಗಣೇಶ್ ಬೊಳುಬೈಲು ಆಯ್ಕೆಯಾದರು.
ಅಂಗನವಾಡಿ ಕಾರ್ಯಕರ್ತೆ ನಿವೇದಿತಾ ವಸಂತ್ ಪ್ರಾರ್ಥಿಸಿ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಸ್ವಾಗತಿಸಿದರು. ಗಂಗಾಧರ ಗೌಡ ಅಡ್ಕಾರು ಮತ್ತು ಸನತ್ ಅಡ್ಕಾರು ಇವರ ಸತತ ಪ್ರಯತ್ನದಿಂದ ಹಾಲು ಉತ್ಪಾದಕರ ಮಹಿಳಾ ಸಂಘ ರಚನೆಯಾಗಿದೆ.
ಸಭೆಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಜಯ ಅಡ್ಕಾರು, ಶಿವಪ್ರಸಾದ್ ಸೋಣಂಗೇರಿ ಹಾಗೂ ಊರವರು ಉಪಸ್ಥಿತರಿದ್ದರು.
- Thursday
- November 21st, 2024