ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಅವರ ನೇತೃತ್ವದಲ್ಲಿ ಅಧ್ಯಕ್ಷತೆಯಲ್ಲಿ ಸಂಪಾಜೆ ಗ್ರಾಮದ ಸಮಸ್ಯೆ ಬಗ್ಗೆ ಸಭೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್
ಗ್ರಾಮದ ಸಮಸ್ಯೆಗಳ ಸಂಪೂರ್ಣ ವಿವರ ನೀಡಿದರು. ಸಹಾಯಕ ಕಮಿಷನರ್ ಪ್ಲಾಟಿಂಗ್ ಸಮಸ್ಯೆ ಬಗ್ಗೆ ಪ್ರತಿ ಸರ್ವೆ ನಂಬರ್ ಮಾಹಿತಿ ಪಡೆದು, ಜಂಟಿ ಸರ್ವೆ ನಡೆಸಿ ಪ್ರತಿ ಸರ್ವೆ ನಂಬರಿನ ಜಾಗದ ವಿಂಗಡಣೆ ಮಾಡಲು ಪೈಲೇಟ್ ಮಾದರಿ ಯೋಜನೆ ರೂಪಿಸಲು ಸೂಚಿಸಿದರು. ವಿದ್ಯುತ್ ಸಬ್ ಸ್ಟೇಷನ್ ಸಂಬಂಧಿಸಿದಂತೆ ಈಗಾಗಲೇ ಹಣ ಕಟ್ಟಲು ಆದೇಶ ಆಗಿದ್ದು ಕೂಡಲೇ ಅರಣ್ಯ ಇಲಾಖೆಗೆ ಪಾವತಿಸುವಂತೆ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮೆಸ್ಕಾಂ ಯಂ.ಡಿ ಗಮನಕ್ಕೆ ತರುತ್ತೇನೆ ಎಂದರು. 125 ಸರ್ವೆ ನಂಬ್ರದಲ್ಲಿ 94 ಸಿ ಹಕ್ಕು ಪತ್ರ, ಆನೆ ಹಾವಳಿ ಬಗ್ಗೆ ಚರ್ಚೆ ನಡೆಯಿತು. ಅಂಗನವಾಡಿ ಕೇಂದ್ರಕ್ಕೆ ಸ್ಥಳ ಕಾದಿರಿಸುವಿಕೆ ಆನ್ಲೈನ್ ಸಮಸ್ಯೆ, ಪೋಡಿ ಸಮಸ್ಯೆ, ಘನ ತ್ಯಾಜ್ಯ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಸೂಚಿಸಿದರು. ಕಲ್ಲುಗುಂಡಿ ಪೇಟೆ ಸ್ವಚ್ಛತೆ ಬಗ್ಗೆ ಸಹಾಯಕ ಕಮಿಷನರ್ ಪ್ರಸಂಸೆ ಮಾತುಗಳನ್ನು ಹೇಳಿದರು. ಸಭೆಯಲ್ಲಿ ತಹಶೀಲ್ದಾರ್ ಅನಿತಾ ಲಕ್ಷ್ಮಿ, ವಲಯ ಅರಣ್ಯಾಧಿಕಾರಿ ಗಿರೀಶ್, ಸರ್ವೆ ಸೂಪರ್ ವೈಸರ್ ಉದಯ, ಮೆಸ್ಕಾಂ ಸುಳ್ಯ ಉಪವಿಭಾಗದ ಸಹಾಯಕ ತಾಂತ್ರಿಕ ಅಧಿಕಾರಿ ಸುಪ್ರೀತ್ ಜೆ, ಅರಂತೋಡು ಶಾಖಾಧಿಕಾರಿ ಅಭಿಷೇಕ್, ತಾಲೂಕು ಅರೋಗ್ಯ ಅಧಿಕಾರಿ ನಂದಕುಮಾರ್, ಪಿ.ಡಿ.ಓ ಜಯಪ್ರಕಾಶ್, ಗ್ರಾಮ ಲೆಕ್ಕಿಗ. ಮಿಯಾ ಸಾಬ್ ಮುಲ್ಲಾ, ಅರಣ್ಯ ಪಾಲಕ ಚಂದ್ರು, ತಾಲೂಕ್ ಪಂಚಾಯತ್ ಮೆನೇಜರ್ ಹರೀಶ್ ಕೆ. ಸೊಸೈಟಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ, ಉಪಾಧ್ಯಕ್ಷೆ ಲಿಸ್ಸಿ ಮೊನಾಲೀಸಾ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷರಾದ ಶಾಹಿದ್ ಟಿ ಎಮ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ಜಗದೀಶ್ ರೈ, ಯಮುನಾ, ಜಗದೀಶ್, ಕೆ ಪಿ. ಚರ್ಚೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಪಂಚಾಯತ್ ಸದಸ್ಯರುಗಳಾದ ಸುಮತಿ ಶಕ್ತಿವೇಲು, ವಿಮಲಾ ಪ್ರಸಾದ್, ಸುಶೀಲ, ಸುಂದರಿ ಮುಂಡಡ್ಕ, ವಿಜಯ್ ಕುಮಾರ್, ಅಬೂಸಾಲಿ, ಎಸ್. ಕೆ. ಹನೀಫ್, ಸವಾದ್ ಗೂನಡ್ಕ, ಮಾಜಿ ಸದಸ್ಯರುಗಳಾದ ನಾಗೇಶ್ ಪಿ ಆರ್, ರಹೀಮ್ ಬೀಜದಕಟ್ಟೆ, ಆಶಾ ಕಾರ್ಯಕರ್ತರು, ಅರೋಗ್ಯ ಸಹಾಯಕಿ, ಪಂಚಾಯತ್ ಸಿಬ್ಬಂದಿ ವರ್ಗ, ಪಲಾನುಭವಿಗಳು, ಉಪಸ್ಥಿತರಿದ್ದರು
- Friday
- November 1st, 2024