ಚೊಕ್ಕಾಡಿ ಪ್ರೌಢಶಾಲೆ ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಚೊಕ್ಕಾಡಿ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯನ್ನು ಪುನರ್ ರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಸಚಿವರೂ ಆಗಿರುವ ಶಾಸಕ ಎಸ್. ಅಂಗಾರ ಹಾಗೂ ಸಂಚಾಲಕರಾಗಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಬೊಳ್ಳೂರು ಆಯ್ಕೆಯಾಗಿದ್ದಾರೆ.
ಜುಲೈ 27 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪುನರ್ ರಚನೆ ಮಾಡಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷ ನಳಿನ್ ಕುಮಾರ್ ಕೋಡ್ತುಗುಳಿ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಯಾಗಿದ್ದ ಹರಿಶ್ಚಂದ್ರ ಮೋಂಟಡ್ಕ ವಾರ್ಷಿಕ ವರದಿ ವಾಚಿಸಿದರು. ಹಿಂದಿನ ಸಾಲಿನ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಚೊಕ್ಕಾಡಿ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ಶಾಸಕ ಎಸ್. ಅಂಗಾರ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಅಣ್ಣಾಜಿಗೌಡ ಪೈಲೂರು, ಸಂಚಾಲಕರಾಗಿ ರಾಧಾಕೃಷ್ಣ ಬೊಳ್ಳೂರು, ಕಾರ್ಯದರ್ಶಿಯಾಗಿ ತೇಜಸ್ವಿ ಕಡಪಳ, ಜೊತೆ ಕಾರ್ಯದರ್ಶಿಯಾಗಿ ತಿಮ್ಮಪ್ಪ ಗೌಡ ಕೊಂಡೆಬಾಯಿ, ಖಜಾಂಚಿಯಾಗಿ ಹರ್ಷವರ್ಧನ ಬೊಳ್ಳೂರು ಆಯ್ಕೆಯಾದರು. ಎಜುಕೇಷನ್ ಸೊಸೈಟಿ ನಿರ್ದೇಶಕರಾಗಿ ಭಾಸ್ಕರ ಮೇರ್ಕಜೆ, ಲೋಕೇಶ್ ಪೈಲೂರು, ಆನಂದ ಚಿಲ್ಪಾರು, ಸುಲೋಚನ ಗೌಡ ದೊಡ್ಡಿಹಿತ್ಲು, ಜಗನ್ನಾಥ ಹಿರಿಯಡ್ಕ, ವೆಂಕಟ್ರಮಣ ಇಟ್ಟಿಗುಂಡಿ, ಸುಪ್ರೀತ್ ಮೋಂಟಡ್ಕ, ಪರಮೇಶ್ವರ ಪಡ್ಪು, ಅರುಣ್ ನಾಯರ್ ಕಲ್ಲು ಮತ್ತು ಅಧಿಕಾರೇತರ ಸದಸ್ಯರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಆಯ್ಕೆಯಾದರು.
ಚೊಕ್ಕಾಡಿ ಎಜುಕೇಷನ್ ಸೊಸೈಟಿ ಕುಕ್ಕುಜಡ್ಕ ಇದರ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಜು.30 ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.
ಎಲ್ಲಾ ನಿರ್ದೇಶಕರುಗಳು ಹಾಗೂ ಚೊಕ್ಕಾಡಿ ಪ್ರೌಢಶಾಲೆ ಮತ್ತು ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.