Ad Widget

ಯಶಸ್ವಿಯಾಗಿ ನಡೆದ “ಅರೆಭಾಷೆ ಪದ್ಯ ಕವನಗಳ ಗಮ್ಮತ್” ಆನ್ ಲೈನ್ ಕಾರ್ಯಕ್ರಮ

. . . . . . .

ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಸಾರಥ್ಯದಲ್ಲಿ ಕಲಾಮಾಯೆ(ರಿ.) ಏನೆಕಲ್, ನೆಗೆ ನೆನ್ನೆಕ್ಕಿ ತಂಡ ಪ್ರಸ್ತುತ ಪಡಿಸಿದ ಅಮರ ಸುಳ್ಯ ಸುದ್ದಿ ಮತ್ತು ಸೋಲಾರ್ ಪಾಯಿಂಟ್ ನಿಂತಿಕಲ್ಲು ಸಹಕಾರದೊಂದಿಗೆ ಸೀನಿಯರ್ ಟಿವಿ ಆನ್ಲೈನ್ “ಅರೆಭಾಷೆ ಪದ್ಯ ಕವನಗಳ ಗಮ್ಮತ್” ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ನಡೆಯಿತು.
ಇದು ಕೇವಲ ಸ್ಪರ್ದೆಯಾಗಿ ನಡೆಸದೆ ಬರಹಗಾರರಿಗೆ, ಓದುಗರಿಗೆ, ಕೇಳುಗರಿಗೆ ಒಂದು ಗಮ್ಮತ್ ನ ವಿಷಯವಾಗಿ ಅರೆಭಾಷೆಯಲ್ಲೊಂದು ವಿಶೇಷ ಪ್ರಯತ್ನವಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಮತ್ತು ಕಿರಿಯ ಸಾಹಿತ್ಯ, ಗಾಯನ ಕ್ಷೇತ್ರದ ಪ್ರತಿಭಾನ್ವಿತರು :- ಶ್ರೀಲತಾ.ಬಿ.ಡಿ ಕೊಯಿನಾಡು, ದಿನೇಶ್ ಹೊಸೋಳಿಕೆ, ದೃತಿ ಮರಕತ, ರಮ್ಯಾ ಅಡ್ಕಾರು, ರಮೇಶ್ ಮೆಟ್ಟಿನಡ್ಕ, ಚೇತಸ್ವಿ ಗೌಡ ಕಮಿಲ, ಅನನ್ಯ ಸುಬ್ರಹ್ಮಣ್ಯ, ತೆಕ್ಕಡೆ.ಬಿ ಕುಮಾರಸ್ವಾಮಿ, ಭವ್ಯ ಗಣೇಶ್ ನಾವೂರು, ಮಾನಸ ವಿಜಯ್ ಕೈತಂಜೆ, ಭಾವನಾ ನಂಗಾರು, ಪ್ರಾಪ್ತಿ ಗೌಡ ಅರಂತೋಡು, ಸ್ಮಿತಾ ಮರಕತ, ಕುಲದೀಪ್ ನಾವೂರು, ಲಲಿತಾ ಮುಕ್ಕಾಟಿ, ಹಾರೆಂಬಿ ಯತೀನ್ ವೆಂಕಪ್ಪ, ವಿಶ್ವದೀಪ್ ಕುಂದಲ್ಪಾಡಿ, ಹೇಮಲತಾ ಕಜೆಗದ್ದೆ, ತಾರಾನಾಥ ಅಡಿಗೈಮನೆ, ಧಾತ್ರಿ ಮರಕತ, ರಮ್ಯಶ್ರೀ ನಡುಮನೆ, ದೀಪಿಕಾ ಸುದರ್ಶನ್ ರವರು ಈ ಕಾರ್ಯಕ್ರಮದಲ್ಲಿ ಪಾಲು ಪಡೆದರು.

ಕವನ ವಿಭಾಗದಲ್ಲಿ ರಮ್ಯಾ ಅಡ್ಕಾರು ಮತ್ತು ಪದ್ಯ ವಿಭಾಗದಲ್ಲಿ ಪ್ರಾಪ್ತಿ ಗೌಡ ಅರಂತೋಡು ಇವರಿಗೆ “ಕಿರಣ ಗೌರವ ಸನ್ಮಾನ” ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ “ಅಭಿನಂದನಾ ಪತ್ರ” ನೀಡಿ ಗೌರವಿಸಲಾಗುವುದು.

ಭಾಗವಹಿಸಿದ ಎಲ್ಲಾ ಬರಹಗಳನ್ನು ಸಂಗ್ರಹಿಸಿ ಯೋಗೀಶ್ ಹೊಸೋಳಿಕೆ ಯವರ ಸಂಪಾದಕತ್ವದಲ್ಲಿ “ಗಮ್ಮತ್” ಎಂಬ ಪುಸ್ತಕ ಹೊರಬರಲಿದೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮದ ಎಡಿಟಿಂಗ್ ವಿಭಾಗದಲ್ಲಿ ಪುಷ್ಪರಾಜ್ ಏನೆಕಲ್ ತಮ್ಮ ಕೈಚಳಕ ತೋರಿಸಿದ್ದಾರೆ.

ಕಿರಣ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೋಳಿಕೆ ಮತ್ತು ಕಲಾಮಾಯೆ ಅಧ್ಯಕ್ಷ ಸುಧೀರ್ ಏನೆಕಲ್ ರವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!