
ಸಾಹಿತಿ, ಕಿರಣ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೋಳಿಕೆ ಮತ್ತು ಸರ್ವೇಯರ್ ಜಯಶ್ರೀ ವೈ. ಹೊಸೋಳಿಕೆ ಯವರ ಪುತ್ರ ವಿದ್ವತ್.ವೈ. ಹೊಸೋಳಿಕೆ ಯವರ ಪ್ರಥಮ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಸಂಪ್ರದಾಯದಂತೆ ದೀಪ ಉರಿಸಿ, ಮಗುವಿಗೆ ಆರತಿ ಎತ್ತಿ, ಸೋಬಾನೆ ಹಾಡಿನೊಂದಿಗೆ ಆಚರಿಸಲಾಯಿತು. ಪ್ರಥಮ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಕುಟುಂಬಸ್ಥರು, ಊರಿನವರು ಭಾಗವಹಿಸಿದ್ದರು. ಯೋಗೀಶ್ ಹೊಸೋಳಿಕೆ ಸ್ವಾಗತಿಸಿ, ವಂದಿಸಿದರು.