
ತೊಡಿಕಾನದಲ್ಲಿ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಬೈಕ್ ಸವಾರ ಜಖಂಗೊಂಡ ಘಟನೆ ಇಂದು ನಡೆದಿದೆ.
ತೊಡಿಕಾನ ದೇವಸ್ತಾನದ ಮ್ಯಾನೇಜರ್ ಆನಂದ ರವರ ಕಾರು ಹಾಗೂ ಕರುಣಾಕರ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಸವಾರ ಜಖಂಗೊಂಡ ಘಟನೆ ನಡೆದಿದೆ. ಗೆಳೆಯನ ದುಬಾರಿ ಬೆಲೆಯ ಬೈಕ್ (Benelli bike)ಅನ್ನು ಟ್ರಯಲ್ ನೋಡಲು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುವಿಗೆ ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.