Ad Widget

ಕೊಡಿಯಾಲಬೈಲು ಸ್ಮಶಾನಕ್ಕೆ ಬೀಗ ಹಾಕಿದ್ದನ್ನು ಖಂಡಿಸಿ ವಿ ಹೆಚ್ ಪಿ, ಭಜರಂಗದಳ ವತಿಯಿಂದ ತಹಶೀಲ್ದಾರ್, ಇಒ ಗೆ ಮನವಿ

. . . . . . . . .

ಉಬರಡ್ಕ ಮಿತ್ತೂರು ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲಿನಲ್ಲಿರುವ ಸಾರ್ವಜನಿಕ ಮುಕ್ತಿಧಾಮ ಹಿಂದೂ ರುದ್ರ ಭೂಮಿಯ ಗೇಟಿಗೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸೇರಿ ಬೀಗ ಹಾಕಿರುವುದನ್ನು ಖಂಡಿಸಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯವರು ಸುಳ್ಯ ತಾಲೂಕು ತಹಶೀಲ್ದಾರರವರಿಗೆ ಹಾಗೂ ಇ.ಒ ರವರಿಗೆ ಜು 28 ರಂದು ಮನವಿ ಸಲ್ಲಿಸಿದರು.
ಕೊಡಿಯಾಲಬೈಲಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸಾರ್ವಜನಿಕರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಶವಸಂಸ್ಕಾರ ನಡೆಸಲು ಪಂಚಾಯತ್ ಅವಕಾಶ ನೀಡಲಾಗಿದ್ದು ವಿನಾಕಾರಣ ಕಾಂಗ್ರೆಸ್ ನವರು ರಾಜಕೀಯ ಮಾಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಹಿಂದೆ ಕೊರೋನಾದಿಂದ ಮೃತಪಟ್ಟ ಸುಮಾರು 26 ಕ್ಕೂ ಹೆಚ್ಚು ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಮಾಡಿದ್ದೇವೆ. ಇದೀಗ ಇದ್ದಕ್ಕಿದ್ದಂತೆ ಗೊಂದಲ ಉಂಟುಮಾಡಿ ಬೀಗ ಹಾಕಿರುವುದು ಸರಿಯಲ್ಲ. ತಕ್ಷಣ ಬೀಗ ತೆಗೆದು ಸಾರ್ವಜನಿಕರ ಸದುಪಯೋಗಕ್ಕೆ ಸಿಗುವಂತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹವರ ವಿರುದ್ಧ ಪ್ರತಿಭಟನೆಯ ಮೂಲಕ ಹೋರಾಟ ಮಾಡಲಿದ್ದೇವೆ. ಸದ್ರಿ ಜಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಉಂಟಾಗಿರುವ ಗೊಂದಲದ ವಿವಾದವನ್ನು ಪರಿಹರಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭ ವಿ.ಹೆಚ್. ಪಿ.ಅಧ್ಯಕ್ಷ ಸೋಮಶೇಖರ ಪೈಕ,ಬಜರಂಗದಳ ಜಿಲ್ಲಾ ಸ.ಸಂಯೋಜಕ ಲತೀಶ್ ಗುಂಡ್ಯ, ಸಂಚಾಲಕ ಸಂದೀಪ್ ವಳಲಂಬೆ, ಕಾರ್ಯಕರ್ತರಾದ ನವೀನ್ ಎಲಿಮಲೆ, ಸನತ್, ನವೀನ್, ವರ್ಷಿತ್ ಚೊಕ್ಕಾಡಿ, ಸಾಜನ್ ಕಾಯರ್ತೋಡಿ ಮತ್ತಿತರರು ಜತೆಯಲ್ಲಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading