ಮೋಸವ ಮಾಡಿದ ಜನರು, ಸುಳ್ಳನು ಹೇಳಿದ ಜನರು…
ಕಷ್ಟದ ಕೂಪಕೆ ನನ್ನ ನೂಕಿದರು…
ನನ್ನವರೇ ನನ್ನನ್ನು ನೂಕಿದರು…
ನನ್ನವರು ಯಾರೆಂದು ನಾ ಅರಿಯುವ ಮುನ್ನ ಕಷ್ಟದ ಕೂಪದಲ್ಲಿ ಸಿಲುಕಿದೆನು…
ನಾನು ಕಷ್ಟದ ಕೂಪದಲ್ಲಿ ಸಿಲುಕಿದೆನು…
ಕನಸು ಕಾಣೋ ಕಣ್ಣು ನನ್ನದು ಕತ್ತಲಾಗಿ ಹೋಯಿತು…
ನಾ ಕಂಡ ಕನಸುಗಳೆಲ್ಲಾ ನನಸಾಗದೆ ಉಳಿಯಿತು…
ನನ್ನ ಬದುಕ ಹಾದಿಯಲ್ಲಿ ಕಷ್ಟಗಳೇ ತುಂಬಿತು…
ಕಷ್ಟದಿಂದ ಬೆಂದ ಮನಸ್ಸು ಕಲ್ಲಾಗಿ ಹೋಯಿತು…
ನಾನು ಯಾರು ಎಂಬ ನಿಜವು ನನಗೆ ತಿಳಿಯದಾಯಿತು…
ಕಷ್ಟದಿಂದ ನನ್ನ ಬದುಕು ಕತ್ತಲಾಗಿ ಹೋಯಿತು…
ಆ ಕತ್ತಲ ನಡುವೆ ನನಗೆ ಬೆಳಕೊಂದು ಕಂಡಿತು….
ಆ ಬೆಳಕ ನಡುವೆ ನನ್ನ ಕನಸುಗಳು ಕಂಡವು…
ಕುಂದಿಹೋದ ಬದುಕಲೊಂದು ವಿಶ್ವಾಸ ಮೂಡಿತು…
ಕನಸುಗಳ ನನಸಾಗಿಸುವ ವಿಶ್ವಾಸ ಮೂಡಿತು…
ಕಷ್ಟದಿಂದ ಮೇಲೆದ್ದು ಕನಸ ಅರಸಿ ಹೊರಟೆನು…
ಅವರಿವರ ಮಾತಿಗೆಂದು ಯೋಚಿಸದೇ ನಡೆದೆನು…
ಗುರಿಯ ಕಡೆಗೆ ಮಾತ್ರ ನನ್ನ ಲಕ್ಷ್ಯವ ಇಟ್ಟೆನು…
ಹಿಂದೆ-ಮುಂದೆ ಯೋಚಿಸದೇ ಗುರಿಯ ಕಡೆಗೆ ನಡೆದೆನು…
ಕಷ್ಚ-ನಷ್ಟ, ತ್ಯಾಗದಿಂದ ನನ್ನ ಗುರಿಯ ತಲುಪಿದೆನು…
✍ಉಲ್ಲಾಸ್ ಕಜ್ಜೋಡಿ