ಕೊಡಿಯಾಲಬೈಲು ಗಾಂಧಿ ವನದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ 3ನೇ ವರ್ಷದ ವನ ಮಹೋತ್ಸವ
ಪಶುಸಂಗೋಪನಾ ಇಲಾಖೆ ಸುಳ್ಯ, ಅರಣ್ಯ ಇಲಾಖೆ ಸುಳ್ಯ ಹಾಗೂ ಗಾಂಧಿ ಚಿಂತನೆ ವೇದಿಕೆ ಸುಳ್ಯ ಇವರ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಾದ ನಾಗರಿಕ ಹೋರಾಟ ಸಮಿತಿ ಕೊಡಿಯಾಲಬೈಲು, ಮಹಮ್ಮಾಯಿ ಸೇವಾ ಸಮಿತಿ ಕೊಡಿಯಾಲಬೈಲು, ಶ್ರೀವಿಷ್ಣು ಯುವಕ ಮಂಡಲ ಅಮೈ ಕೊಡಿಯಾಲಬೈಲು, ವರಲಕ್ಷ್ಮಿ ಯುವತಿ ಮಂಡಲ ಅಮೈ ಕೊಡಿಯಾಲಬೈಲು, ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಮೈ ಕೊಡಿಯಾಲಬೈಲು ಇವುಗಳ ಸಹಕಾರ ದೊಂದಿಗೆ ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನಲ್ಲಿರುವ ಪಶು ಸಂಗೋಪನಾ ಇಲಾಖೆಯ ಜಾಗದಲ್ಲಿ ಮೂರನೇ ವರ್ಷದ ವನಮಹೋತ್ಸವ ಜು.26 ರಂದು ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಚಿತ್ರ ಕುಮಾರಿ ನೆರವೇರಿಸಿ ಶುಭ ಹಾರೈಸಿದರು.
ಸುಳ್ಯ ವಲಯಾರಣ್ಯಾಧಿಕಾರಿ ಆರ್ ಗಿರೀಶ್ ರವರು ಮಾತನಾಡಿ ” ಜನಜೀವನಕ್ಕೆ ಹಸಿರು ಗಿಡ ಮರಗಳು, ಸುಂದರ ಪ್ರಕೃತಿ ಅತೀ ಅಗತ್ಯ. ಅರಣ್ಯ ಇಲಾಖೆ ರಕ್ಷಿತಾರಣ್ಯಗಳ ರಕ್ಷಣೆಯ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಹಸುರೀಕರಣದ ಕಾರ್ಯಕ್ಕೆ ಸಹಕಾರ ನೀಡುತ್ತದೆ. ಆಸಕ್ತಿ ತೋರಿ ಗಿಡ ನೆಟ್ಟು ಪೋಷಿಸಲು ಮುಂದೆ ಬರುವವರಿಗೂ ಗಿಡ ಕೊಡುತ್ತೇವೆ ” ಎಂದು ಹೇಳಿದರು.
ಪಶು ಸಂಗೋಪನಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಡಾ ನಿತಿನ್ ಪ್ರಭು ರವರು ಮಾತನಾಡಿ ” ಈ ಜಾಗ ಪಶು ಸಂಗೋಪನಾ ಇಲಾಖೆಯದಾಗಿದ್ದು ಇಲ್ಲಿ ಏನಾದರೂ ಮಾಡಬೇಕೆಂಬ ಚಿಂತನೆಯಲ್ಲಿರುವಾಗ ಗಾಂಧಿ ಚಿಂತನ ವೇದಿಕೆಯ ಸಂಚಾಲಕರಾದ ಹರೀಶ್ ಬಂಟ್ವಾಳರು ಆಶಾಕಿರಣವಾಗಿ ಬಂದು ಗಾಂಧಿವನ ನಿರ್ಮಿಸುವ ಪ್ರಸ್ತಾಪ ಮಾಡಿದರು. ನಮಗೂ ಅದು ಒಪ್ಪಿಗೆಯಾಯಿತು. ಇಲ್ಲಿ ನಾವು ಮುಂದಕ್ಕೆ ದೊಡ್ಡ ಮಟ್ಟದಲ್ಲಿ ಪಶು ಚಿಕಿತ್ಸೆಗೆ ಸಂಬಂಧಿಸಿದ ಪಾಲಿ ಕ್ಲಿನಿಕ್ ಮಾಡಲಿದ್ದೇವೆ. ತಾಲೂಕು ಮಟ್ಟದಲ್ಲಿ ಗೋಶಾಲೆ ಮಾಡುವ ನಿರ್ಧಾರ ಸರಕಾರ ಕೈಗೊಂಡರೆ ಅದನ್ನೂ ಇಲ್ಲಿ ಮಾಡ ಬಹುದು. ಇಲ್ಲಿ ಬೆಳೆಸುವ ಮರಗಳು ಗೋವುಗಳಿಗೂ ಅನುಕೂಲಕರವಾಗುತ್ತವೆ. ಆದ್ದರಿಂದ ಸ್ಥಳೀಯ ಜನರು ಇಲ್ಲಿನ ಗಿಡಗಳನ್ನು ನಿಮ್ಮದೇ ಎಂಬಂತೆ ನೋಡಿಕೊಳ್ಳಬೇಕು ” ಎಂದರು.
ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹಾಗೂ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ” ಗಾಂಧಿವನವಾಗಿ ರೂಪುಗೊಳ್ಳುತ್ತಿರುವ ಪಶು ಸಂಗೋಪನಾ ಇಲಾಖೆಯ ಈ ಸ್ಥಳ ಮುಂದೆ ಗೋವುಗಳ ವಿಹಾರ ಧಾಮವಾಗಿಯಾಗಲೀ ಮಾನವ ವಿಹಾರ ಧಾಮವಾಗಿಯಾಗಲೀ ಪರಿವರ್ತನೆಗೊಳ್ಳಲಿದ್ದು ಗಾಂಧಿ ಚಿಂತನೆಯೊಂದಿಗೆ ನಾವೆಲ್ಲ ಮುಂದುವರಿಯೋಣ ” ಎಂದರು.
ಕಾರ್ಯಕ್ರಮ ದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಗ್ರಾ.ಪಂ.ಸದಸ್ಯರಾದ ಮಮತಾ ಕುದ್ಪಾಜೆ ಮತ್ತು ಸಂದೀಪ್ ಕುತ್ತಮೊಟ್ಟೆ, ನಾಗರಿಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಎಂ.ಎಚ್., ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ರಾಜೇಶ್ ಮತ್ತು ಸದಸ್ಯರು, ಶ್ರೀವಿಷ್ಣು ಯುವಕ ಮಂಡಲದ ಅಧ್ಯಕ್ಷ ಮಧು ಕಿರಣ್, ಮಾಜಿ ಅಧ್ಯಕ್ಷ ಪ್ರಭಾಕರ ಅಮೈ, ವರಲಕ್ಷ್ಮಿ ಯುವಕ ಮಂಡಲದ ಅಧ್ಯಕ್ಷೆ ವಿಜಯಲಕ್ಷ್ಮಿ , ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಪೂಜಾರಿ, ಲ.ರಾಮಕೃಷ್ಣ ರೈ, ಪಿ.ಎಸ್.ಗಂಗಾಧರ್, ಸಂಜೀವ ಕೊಡಿಯಾಲಬೈಲು, ಮಹಾತ್ಮ ಗಾಂಧಿ ಮಲ್ನಾಡ್ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಚಿದಾನಂದ ಕೇನಾಜೆ, ಬೆಳ್ಳಾರೆ ಪಶುವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಗಾಂಧಿ ಚಿಂತನ ವೇದಿಕೆಯ ಸಂಚಾಲಕರಲ್ಲೊಬ್ಬರಾದ ಡಾ.ಸುಂದರ ಕೇನಾಜೆ, ವೆಂಕಟೇಶ ಮೇನಾಲ, ಸುಂದರ ಪೂಜಾರಿ ಕಾನತ್ತಿಲ, ಉಪವಲಯಾಣ್ಯಾಧಿಕಾರಿಗಳಾದ ಶ್ರೀಮತಿ ಸೌಮ್ಯ ಕೃಷ್ಣಪ್ರಸಾದ್ , ಯಶೋಧರ, ವೀರಭದ್ರಯ್ಯ ಕರಣಿಮಠ, ಪರಮೇಶ್ವರ ಪಟಗಾರ, ಅರಣ್ಯ ರಕ್ಷಕರಾದ ದೇವಿಪ್ರಸಾದ್ ಮತ್ತು ಲಿಖಿತ್ ಆಲಂಕಳ್ಯ, ಅರಣ್ಯ ವೀಕ್ಷಕರಾದ ಗಂಗಾಧರ್, ಜೀಪು ಚಾಲಕ ಪುರುಷೋತ್ತಮ, ಪಶುಸಂಗೋಪನಾ ಇಲಾಖೆಯ ಶ್ರೀಮತಿ ಭವಾನಿ, ಹರೀಶ್, ವಿನೋದ್, ಊರವರಾದ ಉದಯಕುಮಾರ್, ಬಾಬು ಕೊಡಿಯಾಲಬೈಲು, ಲಕ್ಷ್ಮಿ ಅಂಬು ಬೆಳ್ಚಪ್ಪಾಡ, ಜಗದೀಶ್ ಕೊಡಿಯಾಲಬೈಲು, ಶ್ರೀಮತಿ ಪುಷ್ಪರಾಣಿ, ಲಿಖಿತ್, ಗಣೇಶ್, ಗಿರಿಜ ಆನಂದ , ಗಿರಿಜ ನಾರಾಯಣ, ಪೂವಮ್ಮ, ನಾಗರಾಜ, ಸುಜಾತ, ಕಂಚು ನಂಜ, ಕವಿತಾ, ರಮೇಶ, ಮಾಧವ, ದಿನೇಶ, ಬೊಮ್ಮಿ, ಲಲಿತಾ, ದೇಸುಲು, ನಂದಿನಿ, ಹಿತೇಶ್, ಧನುಷ್, ರವೀಂದ್ರ ರೈ ಮೊದಲಾದವರು ಗಿಡ ನೆಡುವುದರಲ್ಲಿ ಭಾಗಿಯಾದರು.