Ad Widget

ಬೊಳುಬೈಲು : ನವಚೇತನ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಆಂದೋಲನ


ನವಚೇತನ ಯುವಕ ಮಂಡಲ ಮತ್ತು ಜಾಲ್ಸುರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೊಳುಬೈಲು, ಬೈತಡ್ಕ, ಕೋನಡ್ಕಪದವು, ವಿನೋಬನಗರ, ಮಾವಿನಕಟ್ಟೆ, ಅಡ್ಕಾರು, ಜಾಲ್ಸುರು, ಸೋಣoಗೇರಿ, ಪೈಚಾರು ಬಸ್ಸು ಪ್ರಯಾಣಿಕರ ತಂಗುದಾಣ ಮತ್ತು ರಸ್ತೆ ಸೂಚನಾ ಫಲಕಗಳ ಸ್ವಚ್ಛತೆ ನಡೆಸಿ ಸ್ಯಾನಿಟೈಸ್ ಮಾಡಿ ಸುತ್ತಮುತ್ತ ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಲೀಲಾವತಿ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಚಂದ್ರಹಾಸ,ಶಿವಪ್ರಸಾದ್ ಕುಕ್ಕಂದೂರು ಹಾಗೂ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!