ಬಳ್ಪ ಗ್ರಾಮ ದೇಶದಲ್ಲೆ ಗುರುತಿಸಿದ ಆದರ್ಶ ಗ್ರಾಮ. ಹೆಸರಿನಂತ ಗ್ರಾಮವಾಗದೇ ಕುಗ್ರಾಮವಾಗಿ ಉಳಿದಿದೆ. ಸಭೆ ಸಮಾರಂಭಗಳಿಗೆ ಸೀಮಿತವಾಯಿತೆ ಹೊರತು ಬಳ್ಪ ಗ್ರಾಮ ಆದರ್ಶ ಗ್ರಾಮವಾಗಿ ಕಾಣಲು ಸಾಧ್ಯವಾಗಿಲ್ಲ. ಸಾಧ್ಯವಾಗಲೂ ಇನ್ನೆಷ್ಟೂ ವರ್ಷ ಬೇಕೋ ?ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಿಗದೇ ಕತ್ತಲೆಯಲ್ಲಿದ್ದ ಮನೆಯ ಬಗ್ಗೆ ಅಮರ ಸುದ್ದಿ ಪತ್ರಿಕೆಯಲ್ಲಿ “47 ವರ್ಷಗಳಿಂದ ಕತ್ತಲೆಯಲ್ಲಿ ಬದುಕುತ್ತಿರುವ ಶೋಚನೀಯ ಬದುಕು” ಎಂಬ ವರದಿ ಪ್ರಕಟಿಸಿತ್ತು. ಈ ವರದಿ ಬಗ್ಗೆ ಜನಪ್ರತಿನಿಧಿಗಳು ಕೆಂಡ ಕಾರಿದ್ದರೇ ಹೊರತು ಬೆಳಕು ನೀಡುವ ಪ್ರಯತ್ನ ನಡೆಸಿಲ್ಲ.
ಇದೀಗ ವಿದ್ಯುತ್ ವಂಚಿತ ಬಳ್ಪ ಗ್ರಾಮದ ಅರ್ಗುಡಿ ಕುಶಾಲಪ್ಪ ಗೌಡರ ಕುಟುಂಬಕ್ಕೆ ಸೆಲ್ಕೋ ಸಂಸ್ಥೆಯ ಸಹಕಾರದಿಂದ ಸೋಲಾರ್ ಅಳವಡಿಸಲಾಗಿದೆ. ಎಷ್ಟೋ ವರ್ಷಗಳ ಕತ್ತಲೆಯಲ್ಲಿ ಬದುಕಿದ, ದೀಪದ ಬೆಳಕಿನಲ್ಲಿ ಓದಿದ ಮಕ್ಕಳ ಮನಸ್ಸಲ್ಲಿ ಸಂತಸ ಕಾಣುವಂತಾಯಿತು.
ಕೂಲಿ ಕೆಲಸ ಮಾಡುವ ಕುಶಾಲಪ್ಪ ಗೌಡರು ಪತ್ನಿ ಕಮಲ ಮಕ್ಕಳಾದ ನಿತೀಶ್ ಮತ್ತು ಮೋಕ್ಷಿತ್ ಜತೆ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ಕಳೆದ 17 ವರ್ಷಗಳಿಂದ ದೀಪದ ಬೆಳಕಿನಲ್ಲಿ ಬೀಡಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಮನೆಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಚಿಮಿಣಿ ದೀಪ ಉಪಯೋಗ ಮಾಡುತಿದ್ದರು . ತಿಂಗಳಿಗೆ 6 ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದು, ಪ್ರಸ್ತುತ ದಿನಗಳಲ್ಲಿ ಡಿಸೇಲ್ ನ ಬೆಲೆ ದುಬಾರಿಯಾಗಿದ್ದರೂ ಕಷ್ಟ ಅನುಭವಿಸುವಂತಾಗಿತ್ತು. ಹಲವು ಬಾರಿ ವಿದ್ಯುತ್ ಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಮಾಡಿದರು ವಿದ್ಯುತ್ ಸಂಪರ್ಕ ಆಗಿಲ್ಲ . ಅಮರ ಸುದ್ದಿ ಪತ್ರಿಕೆ ಯಲ್ಲಿ ಲೇಖನ ಗಮನಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಅವರು ಸಲ್ಕೋ ಸಂಸ್ಥೆಯ ಸೀನಿಯರ್ ಮಾನೇಜರ್ ಸಂಜಿತ್ ರೈ ಅವರನ್ನು ಭೇಟಿ ಮಾಡಿ ಸಂಸ್ಥೆಯ ಸಹಕಾರದೊಂದಿದೆ ಕುಶಾಲಪ್ಪ ಅವರ ಮನೆಗೆ ಸೋಲಾರ್ ಅಳವಡಿಕೆ ಮಾಡಲು ಪ್ರಯತ್ನಿಸಿದರು. ಎಸ್.ಎಸ್. ಎಲ್.ಸಿ. ಪರೀಕ್ಷೆ ಇದ್ದು ಅನುಕೂಲವಾಗುವಂತೆ ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಸೋಲಾರ್ ಸಿಸ್ಟಮನ್ನು ಅನುಷ್ಠಾನ ಮಾಡಲಾಯಿತು.
ಜಿಲ್ಲಾ ನಿರ್ದೇಶಕರಾದ ಪ್ರವೀಣ್ ದೀಪ ಬೆಳಗಿಸುವ ಮೂಲಕ ಜು.23 ರಂದು ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಕುಶಾಲಪ್ಪಗೌಡ ಮಗ ನಿತೀಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ತರಗತಿ ನಡಿಯುತಿದ್ದು ಮೊಬೈಲ್ ಚಾರ್ಜ್ ಮಾಡಲು ಬೇರೆ ಮನೆಗೆ ಹೋಗುತಿದ್ದೆವು. ಹಾಗೂ ಚಿಮಿಣಿ ದೀಪದಲ್ಲಿ ವ್ಯಾಸಂಗ ಮಾಡಲು ಕಷ್ಟ ಪಡುತ್ತಿದ್ದೇವು . ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನನಗೆ ಸೋಲಾರ್ ದೀಪ ತುಂಬಾ ಉಪಯೋಗವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಂಜಿತ್ ರೈ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವಂಚಿತ ಕುಟುಂಬಗಳಿಗೆ ಬೆಳಕು ನೀಡುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದ್ದು ಸೆಲ್ಕೋ ಸಂಸ್ಥೆ ಮುಖಾಂತರ ಬೇಕಾದ ಎಲ್ಲ ಸಹಕಾರ ನೀಡಿದ್ದೇವೆ . ಮುಂದಿನ ದಿನಗಳಲ್ಲಿ ಜಿಲ್ಲೆಯ ವಿದ್ಯುತ್ ವಂಚಿತ ಕುಟುಂಬಗಳಿಗೆ ಸಹಕಾರ ನೀಡುತ್ತೇವೆ ಎಂದರು . ಈ ಸಂದರ್ಭದಲ್ಲಿ ಸೆಲ್ಕೋ ಪುತ್ತೂರು ಶಾಖೆಯ ಮ್ಯಾನೇಜರ್ ಸುಧಾಕರ್ ಹಾಗೂ ಸಿಬ್ಬಂದಿಗಳಾದ ಆಶಿಕ್ ,ಜಗನ್ನಾಥ್ ,ಚಿದಾನಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಂಜ ವಲಯ ಮೇಲ್ವಿಚಾರಕರಾದ ಉಷಾ ಕಲ್ಯಾಣಿ ಅವರು ಉಪಸ್ಥಿತರಿದ್ದರು.