Ad Widget

ಸನಾತನ ಸಂಸ್ಕೃತಿಯ ಅನುಷ್ಠಾನ ಯುವ ಜನಾಂಗದ ಅಭ್ಯುದಯಕ್ಕೆ ಸಂಪತ್ತು – ನ.ಸೀತಾರಾಮ ಅಭಿಮತ

. . . . . . .

ಮಾನವನ ಜೀವನವು ಸಾರ್ಥಕ್ಯವನ್ನು ಸಾಧಿಸಲು ಗುರಿ ಪ್ರಧಾನವಾಗಿರುತ್ತದೆ.ಯುವ ಜನಾಂಗವು ದೇಶದ ಸಂಪತ್ತಾಗಿದ್ದು ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ನಿರಂತರ ಪ್ರೋತ್ಸಾಹ ಅಗತ್ಯ. ಜೀವನದಲ್ಲಿ ಹಣ ಸಂಪತ್ತು ಮಾತ್ರ ಗೌರವ ನೀಡುವುದಲ್ಲ.ಬದಲಾಗಿ ಭಾರತೀಯವಾದ ಭವ್ಯವಾದ ಸನಾತನ ಸಂಸ್ಕೃತಿಯ ಅನುಷ್ಠಾನ ಯುವ ಜನಾಂಗದ ಅಭ್ಯುದಯಕ್ಕೆ ಸಂಪತ್ತಾಗಿದೆ.ಮಹಾಪುರುಷರನ್ನು ಅವರ ಗುಣ ನಡತೆ, ಪರಿಶ್ರಮ ಮತ್ತು ಸಾಧನೆಯಿಂದ ಅವರನ್ನು ಗೌರವಿಸುತ್ತೇವೆ.ಬದಲಾಗಿ ಅವರಲ್ಲಿನ ಹಣದಿಂದ ಅಲ್ಲ.ಆದುದರಿಂದ ಜೀವನದಲ್ಲಿ ಅದ್ವಿತೀಯತೆಯನ್ನು ಸಾಧಿಸಲು ಪರಿಶ್ರಮ ಅತ್ಯಗತ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹಾ ಸೇವಾ ಪ್ರಮುಖ್ ನ.ಸೀತರಾಮ ಹೇಳಿದರು.
ಕ್ರೀಡಾ ಭಾರತಿ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಒಂದು ವಾರದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನಾಂಗವನ್ನು ರಾಷ್ಟ್ರದ ಕ್ರೀಡಾಕ್ಷೇತ್ರದಲ್ಲಿ ಕೊಡುಗೆ ನೀಡಲು ತಯಾರು ಮಾಡುವ ಉದ್ದೇಶದಿಂದ ಕ್ರೀಡಾಭಾರತಿ ಆರಂಭವಾಗಿದೆ.ಯುವಕರ ಸಾಧನೆ ಮತ್ತು ಪ್ರತಿಭೆಯನ್ನು ಗುರುತಿಸಿ ಅವರನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧಕರನ್ನಾಗಿಸಲು ಇದು ಪ್ರಯತ್ನಿಸುತ್ತದೆ. ಸಾಧನೆಗೆ ಬೇಕಾದ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು.ಇದಕ್ಕೆ ಯಥೇಚ್ಚವಾಗಿ ಪ್ರೋತ್ಸಾಹ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ವಹಿಸಿದ್ದರು.ವವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ ಪಾಲ್ತಾಡು, ಮನೋಜ್ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕ್ರೀಡಾ ಭಾರತಿ ಕಡಬ ತಾಲೂಕು ಅಧ್ಯಕ್ಷ ಶಿವರಾಮ ಯೇನೆಕಲ್ಲು, ಕಾರ್ಯದರ್ಶಿ ಮಾಧವ ಕೋಲ್ಪೆ, ಶಿಬಿರದ ಸಂಘಟಕ ಸೋಮಶೇಖರ ನಾಯಕ್, ಉಪಪ್ರಾಂಶುಪಾಲೆ ರೇಖಾರಾಣಿ ಸೋಮಶೇಖರ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಬೋಧಕೇತರ ಸಿಬ್ಬಂಧಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಹಾ ಸೇವಾ ಪ್ರಮುಖ್ ನ.ಸೀತರಾಮ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ತರಬೇತಿ ಕಾರ್ಯಾಗಾರವು ಒಂದು ವಾರಗಳ ಕಾಲ ನಡೆಯಲಿದೆ. ಕಾರ್ಯಗಾರದಲ್ಲಿ ಸಾಮಾನ್ಯ ಜ್ಞಾನ, ಭೂಗೋಳ, ವಿಜ್ಞಾನ, ನೀತಿ ಶಿಕ್ಷಣ, ಇತಿಹಾಸ, ಮಾನಸಿಕ ಸಾಮಾರ್ಥ್ಯ, ಭಾರತೀಯ ಸಂವಿಧಾನ, ಕಂಪ್ಯೂಟರ್ ಶಿಕ್ಷಣ, ರಾಜ್ಯ ಶಾಸ್ತ್ರ ಅರ್ಥಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!