ಸುಳ್ಯ ನಗರ ಪಂಚಾಯತ್ ನ ಹತ್ತನೇ ವಾರ್ಡ್ ನ ರಸ್ತೆಯ ದುರವಸ್ಥೆ ಕುರಿತು ಅನಗತ್ಯ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಸುಳ್ಯದ ಕೋರ್ಟ್ ಮುಂಭಾಗದಿಂದ ಕುರುಂಜಿ ಗುಡ್ಡೆಗೆ ಹೋಗುವ ರಸ್ತೆ ವರ್ಷಗಳಿಂದ ಅಭಿವೃದ್ಧಿಗೆ ಬಾಕಿ ಇದ್ದು ಇದೀಗ ಶಾಸಕರ ವಿಶೇಷ ಪ್ರಯತ್ನದಿಂದ ಈ ರಸ್ತೆಗೆ ಈಗಾಗಲೇ 20ಲಕ್ಷರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯು ಮುಗಿದಿರುತ್ತದೆ. ಮಳೆಯು ಕಡಿಮೆಯಾದ ಕೂಡಲೇ ಸದ್ರಿ ಕೋರ್ಟ್ ಬಳಿಯಿಂದ ಗೋಪಾಲ ನಡುಬೈಲು ರವರ ಮನೆಯ ತನಕದ ರಸ್ತೆಯು ಸಂಪೂರ್ಣವಾಗಿ ಕಾಂಕ್ರಿಟೀಕರಣ ಗೊಳ್ಳಲಿದೆ. ಅಲ್ಲದೆ ಒಳಾಂಗಣ ಕ್ರೀಡಾಂಗಣ ಕ್ಕೆ ಹೋಗುವ ರಸ್ತೆಯೂ ಕೂಡಾ 20ಲಕ್ಷರೂ. ವೆಚ್ಚದಲ್ಲಿ ಪೂರ್ಣವಾಗಿ ಕಾಂಕ್ರಿಟೀಕರಣ ಗೊಳ್ಳಲಿದೆ. ಮಳೆಯ ರಭಸ ಕಡಿಮೆಯಾಗುವವರೆಗೆ ಸಾರ್ವಜನಿಕರು ಸಹಕರಿಸಬೇಕಿದೆ. ಕಳೆದ ವರ್ಷ ಶಾಸಕರ ಅನುದಾನದಲ್ಲಿ ಹಾಗೂ ನಗರ ಪಂಚಾಯತ್ ನ ವಿವಿಧ ಅನುದಾನದಲ್ಲಿ ಹತ್ತನೇ ವಾರ್ಡ್ ವ್ಯಾಪ್ತಿಯಲ್ಲಿ 30 ಲಕ್ಷ ರೂಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿರುತ್ತದೆ. ವಾರ್ಡಿನಲ್ಲಿ ಕೆಲವು ಮನೆಗಳವರಿಗೆ ರಸ್ತೆಯ ಸಮಸ್ಯೆ ಇದ್ದು ರಸ್ತೆಗೆ ಸಂಬಂಧಿಸಿ ಜಾಗದ ಸಮಸ್ಯೆ ಇರುವುದರಿಂದ ರಸ್ತೆ ಸಮಸ್ಯೆಯನ್ನು ಶಾಶ್ವತ ಪರಿಹಾರ ಮಾಡಲು ವಾರ್ಡ್ ನ ಸದಸ್ಯನಾಗಿ ಹಾಗೂ ನಗರ ಪಂಚಾಯತ್ ನ ಅಧ್ಯಕ್ಷನಾಗಿ ನಾನು ಬದ್ಧನಾಗಿರುತ್ತೇನೆ. ಅಲ್ಲದೆ ಒಳಾಂಗಣ ಕ್ರೀಡಾಂಗಣದ ಸುತ್ತಲಿನ ವರ್ತುಲ ರಸ್ತೆಯನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಲು ಬದ್ಧನಿರುತ್ತೇನೆ. ವಾರ್ಡಿನ ಮತ್ತು ಕುರುಂಜಿ ಗುಡ್ಡೆಯ ಎಲ್ಲಾ ಸಾರ್ವಜನಿಕರು ಅಪಪ್ರಚಾರಕ್ಕೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ವಾರ್ಡಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿ ದಲ್ಲಿ ಕಾನೂನಾತ್ಮಕವಾಗಿ ಸರಿಪಡಿಸುವ ಕಾರ್ಯ ವಾಗಿದ್ದರೆ ಅದನ್ನು ಮಾಡಿಕೊಡಲು ನಾನು ಬದ್ಧನಾಗಿರುತ್ತೇನೆ ಎಂದು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024