
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರು ಗ್ರಾಮದಲ್ಲಿ ಚೂಡಾಮಣಿ ಹೆಸರಿನ ಪ್ರಗತಿ ಬಂಧು ಸಂಘವನ್ನು ಮಾಜಿ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ರವರು ಚೂಡಾಮಣಿ ಎಂಬ ಸಂಘವನ್ನು ದೀಪ ಬೆಳಗಿ ಉದ್ಘಾಟಿಸಿ ಐದು ಮಂದಿಯೂ ಏಕ ಮನಸ್ಸಿನಿಂದ ಕೂಡಿ ಮಾಡಿದ ಸಂಘವು ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸಬಲರನ್ಬಾಗಿ ಮಾಡಿ ಮತ್ತು ನಿಮಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕುವಂತಾಗಲಿ ಎಂದು ಶುಭಹಾರೈಸಿದರು
ಒಕ್ಕೂಟದ ಅಧ್ಯಕ್ಷ ಅಚ್ಯುತ ಗುತ್ತಿಗಾರು ರವರು ಸಂಘದಲ್ಲಿನ ಪ್ರತಿಯೊಂದು ಕಾರ್ಯಗಳಿಗೆ ಕೈಜೋಡಿಸಿ ಗುತ್ತಿಗಾರು ಒಕ್ಕೂಟಕ್ಕೆ ಹಾಗೂ ನಿಮ್ಮ ಸಂಘಕ್ಕೆ ಉತ್ತಮ ಕೀರ್ತಿ ಬರಲಿ ಎಂದು ಶುಭ ಹಾರೈಸಿದರು
ಸೇವಾ ಪ್ರತಿನಿಧಿಯಾದ ಲೋಕೇಶ್ವರ ಡಿ ಆರ್ ರವರು ಸಂಘದ ನೀತಿ ನಿಯಮಗಳನ್ನು ತಿಳಿಸಿ ಎಲ್ಲರೂ ಒಗ್ಗಟ್ಟುನಿಂದ ಸಂಘವನ್ನು ನಡೆಸಿ ಎಂದು ಶುಭಹಾರೈಸಿ, ಕಾರ್ಯಕ್ರಮ ನಿರೂಪಿಸಿದರು.
ಸಂಘದ ಅಧ್ಯಕ್ಷ ರಾಗಿ ಮ್ಯಾಲಪ್ಪಗೌಡ ಕೊಂಬೊಟ್ಟು ಕಾರ್ಯದರ್ಶಿಯಾಗಿ ಜಯರಾಮ ಪೈಕ ಕೋಶಾಧಿಕಾರಿಯಾಗಿ ಮಾಧವ ಎರ್ದಡ್ಕ ಸದಸ್ಯರಾಗಿ ವಿನಯ್ ಸಾಲ್ತಾಡಿ ಮತ್ತು ರಾಕೇಶ್ ಮೆಟ್ಟಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು