Ad Widget

ಸರಕಾರಿ ಆಸ್ಪತ್ರೆಯಲ್ಲಿ ಊಟ ನೀಡಿ ಬಕ್ರೀದ್ ಆಚರಿಸಿದ ನಾವೂರು ಬೀಜಕೊಚ್ಚಿ ಫ್ರೆಂಡ್ಸ್


ಸುಳ್ಯ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳ ಮನೆಯವರಿಗೆ ಮಧ್ಯಾಹ್ನದ ಊಟವನ್ನು ನೀಡುವ ಮೂಲಕ ನಾವೂರು ಬೀಜಕೊಚ್ಚಿ ಫ್ರೆಂಡ್ಸ್ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಮಾರು 70 ಮಂದಿಗೆ ಮಧ್ಯಾಹ್ನದ ಊಟವನ್ನು ವಿತರಿಸಿ ಹಬ್ಬದ ಸಂತೋಷವನ್ನು ಇತರರಿಗೂ ಹಂಚಿದ್ದಾರೆ. ಈ ತಂಡದಲ್ಲಿ ಹಲವಾರು ಮಂದಿ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಳೆದ ಲಾಕ್ ಡೌನ್ ದಿನಗಳಲ್ಲಿ ಪರಿಸರದ ಬಡಜನತೆಗೆ ವಿವಿಧ ರೀತಿಯ ಸಹಾಯ ಹಸ್ತವನ್ನು ನೀಡಿ ಜನಮೆಚ್ಚುಗೆಗೆ ಪಾತ್ರವಾಗಿರುತ್ತಾರೆ.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ, ಕಾರ್ಯದರ್ಶಿ ಸಿದ್ದೀಕ್, ಸಮಿತಿಯ ಸದಸ್ಯರುಗಳಾದ ಶರೀಫ್ ಕಂಠಿ, ಶಾಹುಲ್ ಹಮೀದ್ ಕುತ್ತಮಟ್ಟೆ, ಸಲ್ಮಾನ್ ಫಾರಿಷ್, ಹಮೀದ್, ಸಿನಾನ್, ಆಫ್ರಾಜ್, ಹಬೀಬ್, ಶಹಬಾದ್, ಫಯಾಜ್ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!