ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ
ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಇಂದು ತಾಲೂಕು ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನ.ಪಂ.ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿ ಮಾತನಾಡಿದರು. ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ಸತ್ಯಾಸತ್ಯತೆ,ನಿಖರತೆ ಜತೆಗೆ ಸಂಪೂರ್ಣತೆ ಇದ್ದರೆ ಮಾತ್ರ ಉತ್ರಮ ವರದಿಯಾಗಬಲ್ಲುದು. ಪತ್ರಕರ್ತರು ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕಾದ ಅನಿವಾರ್ಯತೆ ಇದೆ ಎಂದರು.
ಅಂಕಣಕಾರರು ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಉಪನ್ಯಾಸ ನೀಡಿದರು. ಪತ್ರಿಕೆಗಳು ಮೌಲ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಅಭಿವೃದ್ಧಿಯ ಪತ್ರಿಕೋದ್ಯಮ ಸಮಾಜಕ್ಕೆ ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆಯ ಮಾಜಿ ಪತ್ರಕರ್ತ ಶಿವರಾಮ ಕೊಯಿಂಗೋಡಿಮೂಲೆ ಇವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಗೌರವಾಧ್ಯಕ್ಷ ಮುರಳೀಧರ ಅಡ್ಡನಪಾರೆ, ಖಜಾಂಜಿ ಲೋಕೇಶ್ ಗುಡ್ಡೆಮನೆ, ಪ್ರ.ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ನಿರ್ದೇಶಕ ಗಂಗಾಧರ ಕಲ್ಲಪ್ಪಳ್ಳಿ ಸ್ವಾಗತಿಸಿ, ಗೌರವಾಧ್ಯಕ್ಷ ಶಿವಪ್ರಸಾದ್ ಕೇರ್ಪಳ ವಂದಿಸಿದರು. ಜಿಲ್ಲಾ ಸಂಘದ ನಿರ್ದೇಶಕ ಲೋಕೇಶ್ ಪೆರ್ಲಂಪಾಡಿ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಾಥಮಿಕ ಭಕ್ತಿ ಗೀತೆ ಸ್ಪರ್ಧೆ : ಪ್ರಥಮ : ಶರಧಿ ಪಿ . ಎನ್ ಕೆ . ಪಿ . ಎಸ್ ಬೆಳ್ಳಾರೆ , ದ್ವಿತೀಯ : ತನ್ನಯ್ ಸೋಮಯಾಗಿ ಸೈಂಟ್ ಜೋಸೆಫ್ ಸುಳ್ಯ , ತೃತೀಯ : ಪುನರ್ವಿ ಕುರುಂಜಿ ಕೆ . ವಿ . ಜಿ . ಐ . ಪಿ . ಎಸ್ ಸುಳ್ಯ ಮತ್ತು ಮಿಶಾ ಐವರ್ನಾಡು ಜ್ಞಾನ ಗಂಗಾ ಬೆಳ್ಳಾರೆ, ಹೈಸ್ಕೂಲ್ ವಿಭಾಗದ ಭಾವಗೀತೆ ಸ್ಪರ್ಧೆ – ಪ್ರಥಮ : ಶ್ರೀಲಯ ಮಧುವನ ಸರಕಾರಿ ಜೂನಿಯರ್ ಕಾಲೇಜ್ ಸುಳ್ಯ , ದ್ವಿತೀಯ : ಚಂದನಲಕ್ಷ್ಮಿ ಪಿ.ಎನ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ , ತೃತೀಯ – ಋತ್ವಿಕಾ ವೈ.ಎನ್ , ಹರಿಹರ ಪಲ್ಲತ್ತಡ್ಕ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ , ಪಿ.ಯು. ಭಾಷಣ ಸ್ಪರ್ಧೆ – ಪ್ರಥಮ : ಚರಿಷ್ಮಾ ಮಡ್ತಿಲ ,ರೋಟರಿ ಪಿ . ಯು . ಕಾಲೇಜು ಸುಳ್ಯ , ದ್ವಿತೀಯ ಮಲ್ಲಿಕಾ ಕೆ . , ಶ್ರೀ ಶಾರದಾ ಮಹಿಳಾ ಪಿ . ಯು ಕಾಲೇಜು ಸುಳ್ಯ , ತೃತೀಯ : ಜನನಿ ಪಟ್ರಕೋಡಿ , ಸರಕಾರಿ ಪ . ಪೂ . ಕಾಲೇಜು ಸುಳ್ಯ ಪಡೆದುಕೊಂಡಿದ್ದಾರೆ .