ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಪ್ರಯುಕ್ತ “ಹಸಿರು-ಉಸಿರು” ವನಮಹೋತ್ಸವ ಕಾರ್ಯಕ್ರಮ ಜು. 22ರಂದು ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ನಡೆಯಲಿದೆ. ಸುಳ್ಯದ ವಲಯ ಅರಣ್ಯಾಧಿಕಾರಿಗಳಾದ ಗಿರೀಶ್ ಆರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸತ್ಯಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಲೀಲಾ ಮನಮೋಹನ್, ಪ್ರಸಾದ್ ಕುಮಾರ್ ಮೇನಾಲ, ಶ್ರೀಮತಿ ಗೀತಾ ಕಲ್ಲಗುಡ್ಡೆ, ಶ್ರೀಮತಿ ದೇವಕಿ ವಿಷ್ಣುನಗರ, ಶ್ರೀಮತಿ ಸರೋಜಿನಿ ಕರಿಯಮೂಲೆ, ಯಶೋಧರ
ಡಾ. ಪೂವಪ್ಪ ಗೌಡ ಕೆ, ಶ್ರೀಮತಿ ರತ್ನಾವತಿ ಡಿ., ಶ್ರೀಮತಿ ಜಯಮಾಲ ಎ.ಕೆ, , ಡಾ.ಅನುರಾಧಾ ಕುರುಂಜಿ, ದಿವೀಶ್ ಕೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
- Thursday
- April 3rd, 2025