ಅಚ್ರಪ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಾದ ಸುಳ್ಯದ ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮಂಗಳೂರಿನ 4 ಹೆಚ್ ಟ್ರಸ್ಟ್ ವತಿಯಿಂದ ಬ್ಯಾಗ್,ಪುಸ್ತಕ, ಸಮವಸ್ತ್ರ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಹರೀಶ್ ಕಡಪಳ, ಉಪಾಧ್ಯಕ್ಷರಾದ ಜಯಶ್ರೀ, ಮುಖ್ಯಶಿಕ್ಷಕಿ ಶ್ರೀಮತಿ ಶ್ವೇತಾ, ಸಹಶಿಕ್ಷಕರಾದ ಚಿನ್ನಸ್ವಾಮಿ, ಶಾಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷ 5ನೇ ತರಗತಿಯಿಂದ ಆರು ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ವರ್ಗಾವಣೆಗೊಂಡಿದ್ದು ಶಾಲೆಯ ಮಕ್ಕಳ ಸಂಖ್ಯೆಯೂ 27 ರಿಂದ 21ಕ್ಕೆ ಇಳಿಯುವಂತಾಗಿತ್ತು. ಹಾಗೂ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ ಕಡಿಮೆಯಿದ್ದುದರಿಂದ ಶಾಲಾ ಶಿಕ್ಷಕರು ಶಾಲಾ ಆಸುಪಾಸಿನ ಪ್ರದೇಶಕ್ಕೆ ತೆರಳಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆಸಿ 1ನೇ ತರಗತಿಗೆ ಐದು ಮಕ್ಕಳು ಮತ್ತು 4ನೇ ತರಗತಿಗೆ 2 ಮಕ್ಕಳು ಹೊಸದಾಗಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಲ್ಲದೆ ಮಕ್ಕಳ ಕಲಿಕೆಗೆ ಪೂರಕವಾಗುವ ಕಲಿಕಾ ಸಾಮಗ್ರಿಗಳ ಜೊತೆಗೆ ಬ್ಯಾಗ್ ವ್ಯವಸ್ಥೆಯನ್ನು ಸುಳ್ಯದ ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಮಾಡಿಸಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೋವಿಡ್ ನಿಂದಾಗಿ ಈ ವರ್ಷ ಇನ್ನೂ ಶಾಲೆ ಸಂಪೂರ್ಣ ಪ್ರಾರಂಭವಾಗದ ಕಾರಣ ಮಕ್ಕಳ ಕಲಿಕೆ ಕುಂಠಿತಗೊಳ್ಳಬಾರದು ಎಂಬ ದೃಷ್ಟಿಯಿಂದ ಶಾಲಾ ಶಿಕ್ಷಕರು ಮಗುವಿನ ಕಲಿಕಾ ವೇಳಾಪಟ್ಟಿ ತಯಾರಿಸಿ ಮನೆಯಲ್ಲಿ ಓದುವ ಕೋಣೆ ನಿರ್ಮಿಸಿ ಶಾಲಾ ವಾತಾವರಣ ನಿರ್ಮಿಸುವಂತೆ ಪೋಷಕರಲ್ಲಿ ಉತ್ತೇಜಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 4 ಹೆಚ್ ಟ್ರಸ್ಟ್ ಮಂಗಳೂರು ಇವರ ವತಿಯಿಂದ ಸಮವಸ್ತ್ರದ ವ್ಯವಸ್ಥೆಯನ್ನು ಕೂಡ ಮಾಡಿರುತ್ತಾರೆ. ಈ ಎಲ್ಲಾ ಯೋಜನೆಗಳಿಂದ ಪ್ರೇರಣೆಗೊಂಡ ಪೋಷಕರು ಮಕ್ಕಳನ್ನು ದಾಖಲು ಮಾಡಲು ಮುಂದಾಗಿರುತ್ತಾರೆ.