
ಗಂಡ ಹೊಸ ಸೀರೆ ತರುತ್ತಾನೆಂದು ಹಳೆ ಸೀರೆ ಬೆಂಕಿಗೆ ಹಾಕಿದಂತಾಯಿತು ಸೇವಾಜೆ ಸೇತುವೆ ಕಥೆ. ಸೇವಾಜೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಹಳೆ ಸೇತುವೆ ಕೆಡವಲಾಗಿತ್ತು. ಆದರೆ ನೂತನ ಸೇತುವೆ ನಿರ್ಮಾಣ ಆಗದೇ ಹಳೆ ಸೇತುವೆಯೂ ಇಲ್ಲದೇ ಜನ ಪರದಾಟ ನಡೆಸುವಂತಾಗಿದೆ. ರಸ್ತೆ ಬಂದ್ ಆಗಿರುವ ಬಗ್ಗೆ ಸರಿಯಾದ ಸೂಚನಾ ಫಲಕ ಇಲಾಖೆ ಆಳವಡಿಸದೇ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದರು. ಈ ಮಾರ್ಗವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಸುಬ್ರಮಣ್ಯ ದೇವಸ್ಥಾನಕ್ಕೆ ಬರುತಿದ್ದು ಸೇತುವೆಯ ಬಗ್ಗೆ ತಿಳಿಯದೇ ಪುನಃ ತಿರುಗಿ ಹೋಗಲು ಹಾಗೂ ಪರ್ಯಾಯ ರಸ್ತೆ ತಿಳಿಯದೇ ಸಂಕಟ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಮರ್ಕಂಜ ಗ್ರಾಮ ಪಂಚಾಯತ್ ನವರು ಸುಳ್ಯ ಆರಕ್ಷಕ ಠಾಣೆಯ ಸಹಕಾರದೊಂದಿಗೆ ಅರಂತೋಡಿನಿಂದ ಮರ್ಕಂಜಕ್ಕೆ ತಿರುಗುವ ಮುಖ್ಯ ರಸ್ತೆಯಲ್ಲಿ ಮತ್ತು ಮರ್ಕಂಜ ಪೇಟೆಯಲ್ಲಿ ಹಾಗೂ ಎಲಿಮಲೆ ಯಲ್ಲಿ ಪ್ರವಾಸಿಗರ ಗಮನಕ್ಕೆ ಸೂಚನೆಯನ್ನು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಆಚಾರ್ಯ ಕೊಚ್ಚಿ ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.