Ad Widget

ಸಂಪಾಜೆ : ಆನೆ ದಾಳಿ – ಕೃಷಿ ಹಾನಿ


ಸಂಪಾಜೆ ಗ್ರಾಮದ ಪೆಲ್ತಡ್ಕ ಪದ್ಮನಾಭ ಹಾಗೂ ಶೇಷಪ್ಪ ಅವರ ತೋಟಕ್ಕೆ ನಿನ್ನೆ ರಾತ್ರಿ ಆನೆ ದಾಳಿ ಮಾಡಿ ತೆಂಗು ಅಡಿಕೆ, ಬಾಳೆ ಗಿಡಗಳ ನಾಶ ಮಾಡಿ ಅಪಾರ ನಷ್ಟ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಪಾಲಕ ಚಂದ್ರು, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಹನೀಫ್ ಎಸ್. ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅರಣ್ಯ ಇಲಾಖೆಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಂಪಾಜೆ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ ದಾಳಿ ಮಾಡುತ್ತಿದ್ದು ಕೂಡಲೇ ಕೃಷಿಕರ ರಕ್ಷಣೆ ಮಾಡಿ ಸೂಕ್ತ ಪರಿಹಾರ ಹಾಗೂ ಆನೆ ಬಾರದಂತೆ ಶಾಶ್ವತ ತಡೆಗೋಡೆ ವ್ಯವಸ್ಥೆ ಮಾಡಬೇಕಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಗ್ರಹಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!