ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಯೇನೆಕಲ್ಲು ಒಕ್ಕೂಟದ 41 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೇನೆಕಲ್ಲು ಒಕ್ಕೂಟದ ಸ್ಥಾಪಕಾಧ್ಯಕ್ಷರು ಹಾಗೂ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿಯಾಗಿರುವ ಶಿವಪ್ರಸಾದ್ ಮಾದನಮನೆ, ಯೇನೆಕಲ್ಲು ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ನಡ್ಕ, ಉಪಾಧ್ಯಕ್ಷರಾದ ಮಹಾಬಲ ಗೌಡ, ಕೋಶಾಧಿಕಾರಿ ರಂಜನ್ ಕುಮಾರ್, ನಿಕಟಪೂರ್ವ ಅದ್ಯಕ್ಷರಾದ ವಿಶ್ವನಾಥ ಕೆಬ್ಬೋಡಿ, ಸುಳ್ಯ ತಾಲೂಕು ಲೆಕ್ಕ ಪರಿಶೋಧಕರಾದ ಉಮೇಶ್, ನಗದು ಸಂಗ್ರಾಹಕರಾದ ಕೀರ್ತಿ, ಸೇವಾಪ್ರತಿನಿಧಿ ತಾರಾ.ಟಿ ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
✍ವರದಿ :- ಉಲ್ಲಾಸ್ ಕಜ್ಜೋಡಿ