ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.14 ರಂದು ಸುಬ್ರಹ್ಮಣ್ಯ ಒಕ್ಕೂಟದ 47 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಅದ್ಯಕ್ಷರು ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಇದರ ಹಾಲಿ ಸದಸ್ಯರಾದ ವಿಮಲಾ ರಂಗಯ್ಯ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸವಿತಾ ಭಟ್, ಸುಬ್ರಹ್ಮಣ್ಯ ಒಕ್ಕೂಟದ ಅಧ್ಯಕ್ಷರಾದ ತೇಜಕುಮಾರ್ ಹಾಗೂ ಉಪಾಧ್ಯಕ್ಷರಾದ ಶೈಲಜಾ, ತೀರ್ಥರಾಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ನಗದು ಸಂಗ್ರಾಹಕರಾದ ಕುಸುಮಾ ಹಾಗೂ ಶ್ರೀಮತಿ ಪುಷ್ಪಾ, ಸೇವಾಪ್ರತಿನಿಧಿ ಹರಿಣಾಕ್ಷಿ, ಜಯಶ್ರೀ ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
✍ವರದಿ :- ಉಲ್ಲಾಸ್ ಕಜ್ಜೋಡಿ