ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.13 ರಂದು ಬಾಳುಗೋಡು ಒಕ್ಕೂಟದ 42 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಹರಿಹರ ಪಲ್ಲತ್ತಡ್ಕ ಸೇವಾ ಕೇಂದ್ರದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳುಗೋಡು ಒಕ್ಕೂಟದ ಅಧ್ಯಕ್ಷರಾದ ಲೋಕೇಶ್.ಬಿ ವಹಿಸಿದ್ದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ, ನಿಕಟಪೂರ್ವ ಅದ್ಯಕ್ಷರಾದ ಜಯರಾಮ್, ತಾಲೂಕು ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್, ಸೇವಾಪ್ರತಿನಿಧಿ ನಾಗವೇಣಿ ಬಾಳುಗೋಡು, ನಗದು ಸಂಗ್ರಹಕರಾದ ಕೃಷ್ಣಪ್ಪ ಹಾಗೂ ನಗದು ಸಂಗ್ರಾಹಕರಾದ ಗಾಯತ್ರಿ ಹಾಗೂ ಊರಿನ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
*✍ವರದಿ :- ಉಲ್ಲಾಸ್ ಕಜ್ಜೋಡಿ*