Ad Widget

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜು.13 ರಂದು ರಿಕ್ಷಾ ಚಾಲಕರಿಂದ ತಾಲೂಕಿನಾದ್ಯಂತ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಜು.13ರಂದು ಬಿ.ಎಂ.ಎಸ್ ಸಂಯೋಜಿತ ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಜು.9ರಂದು ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು.

ಸುಳ್ಯ ಹಳೇ ಬಸ್ ನಿಲ್ದಾಣ, ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು, ದೊಡ್ಡತೋಟ, ಉಬರಡ್ಕ, ಕಲ್ಲುಗುಂಡಿ ನಿಲ್ದಾಣಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಸುತ್ತೇವೆ. ಆ ವೇಳೆ ಒಂದು ಗಂಟೆ ಅಟೋ ಸಂಚಾರ ಇರುವುದಿಲ್ಲ ಎಂದರು.

ಪೆಟ್ರೋಲ್ ಬೆಲೆಯು ಲೀಟರಿಗೆ ರೂ.104 ಮತ್ತು ಡೀಸೆಲ್ ರೂ.94 ಆಗಿದೆ. ಇದರಿಂದ ಚಾಲಕರ ಜೀವನ ಕಷ್ಟಕರವಾಗಿದೆ. ಇಂಧನ ಬೆಲೆ ಏರಿಕೆಯಾದರೂ ಪ್ರಯಾಣದರ ಪರಿಷ್ಕರಣೆ ಆಗದಿರುವುದರಿಂದ ಜೀವನದ ದೈನಂದಿನ ಬದುಕು ದುಸ್ತರವಾಗಿದೆ. ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿ ಇಂಧನವನ್ನು ಸಬ್ಸಿಡಿ ದರದಲ್ಲಿ ಒದಗಿಸಬೇಕೆಂದು ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮಾತನಾಡಿ ಕೊರೊನಾದಂತೆ ಬೆಲೆ ಏರಿಕೆಯೂ ಜೀವನ ಮತ್ತು ಜೀವನವನ್ನು ಕಸಿಯುತ್ತಿದೆ . ಬೆಲೆ ಏರಿಕೆಯ ಬಗ್ಗೆ ಸರಕಾರ ಗಮನಹರಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಸಂಘದ ಕಾನೂನು ಸಲಹೆಗಾರ ಭಾಸ್ಕರ ರಾವ್, ಪ್ರ.ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!